ಪೆರ್ಲ : ಗ್ರಾಮೀಣ ಪ್ರದೇಶವಾದ ಸ್ವರ್ಗ-ವಾಣಿನಗರ ರಸ್ತೆಗಳಲ್ಲಿ ರಾತ್ರಿ ಪ್ರೇತ ಕಂಡಿದೆ ಎಂಬ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಿ ವಿಕೃತ ಮನೋರಂಜನೆ ಅನುಭವಿಸುವ ದುಷ್ಕರ್ಮಿಗಳ ಬಗ್ಗೆ ಕಾನೂನು ಇಲಾಖೆ ಕಟ್ಟುನಿಟ್ಟಿನ ಕಣ್ಗಾವಲಿಟ್ಟಿದೆ.
ಪೆರ್ಲದಿಂದ ಸ್ವರ್ಗ ಹಾಗೂ ವಾಣಿನಗರ ರಸ್ತೆ ಮೂಲಕ ತೆರಳುವಾಗ ಮಧ್ಯೆ ರಾತ್ರಿ ಪ್ರೇತ ಗೋಚರಿಸಿದೆ ಎಂಬ ಎಡಿಟಿಂಗ್ ಪೊಟೋ ಸೃಷ್ಠಿಸಿ ಇಲ್ಲಿನ ಕೆಲವು ವಾಟ್ಸಫ್ ಗುಂಪುಗಳಾದ ಜಾಲತಾಣಗಳಲ್ಲಿ ಕಿಡಿಗೇಡಿಗಳು ಕಳೆದ ಕೆಲವು ದಿನಗಳಿಂದ ಪ್ರಚುರಪಡಿಸುತ್ತಿದ್ದು ಇದು ಸುಳ್ಳು ವದಂತಿ ಎಂದು ಸ್ಪಷ್ಟಪಡಿಸಲಾಗಿದೆ. ಇದರ ಹಿಂದೆ ಕಾನೂನುಬಾಹಿರ ಚಟುವಟಿಕೆಯ ದುರುದ್ದೇಶವಿದ್ದು ಕೆಲವು ಸಮಾಜ ದ್ರೋಹಿಗಳು ತಮ್ಮ ಮೊಬೈಲ್ ಕ್ಯಾಮರಗಳಲ್ಲಿ ಈ ರೀತಿಯ ಚಿತ್ರಣಗಳನ್ನು ನಿರ್ಮಿಸುತ್ತಿರುವುದಾಗಿ ತಿಳಿದು ಬಂದಿದೆ.
ವಾಣಿನಗರದ ಚೆನ್ನುಮೂಲೆಯ ಎಂಬಲ್ಲಿ ರಸ್ತೆಮಧ್ಯೆ ರಿಕ್ಷಾ ಡ್ರೈವರ್ ಓರ್ವರಿಗೆ ಪ್ರೇತ ಕಂಡು ಬಂದಿದೆ ಎಂಬುದಾಗಿ ಫೇಕ್ ಪೊಟೋ ಸೃಷ್ಟಿಸಿ ಸುದ್ದಿ ಹಬ್ಬಲಾಗಿದ್ದು ಬಳಿಕ ಇದೀಗ ಸ್ವರ್ಗದ ಗೋಳಿಕಟ್ಟೆಯ ಬಸ್ ನಿಲ್ದಾಣ ಬಳಿ ಪ್ರೇತ ನಿಂತಿರುವ ಪೋಟೋವೊಂದನ್ನು ಕಾರಿನಲ್ಲಿ ಹೋಗುವವರು ಸೆರೆ ಹಿಡಿದರೆಂಬ ಸುಳ್ಳು ಸುದ್ದಿ ಹಬ್ಬಲಾಗುತ್ತಿದೆ.
ಇದರಿಂದಾಗಿ ಹಳ್ಳಿ ಪ್ರದೇಶದ ಮಕ್ಕಳು ಮಹಿಳೆಯರ ಸಹಿತ ನಾಗರಿಕರಲ್ಲಿ ಭೀತಿ ಸೃಷ್ಠಿಸುತ್ತಿರುವುದಾಗಿ ದೂರಲಾಗಿದ್ದು, ಈ ಬಗ್ಗೆ ಪೊಲೀಸರು ನಿಗಾ ಇರಿಸಿದ್ದು ಸ್ಥಳೀಯ ವ್ಯಕ್ತಿಯೋರ್ವ ಸಾವಿರಾರು ರೂ ಬೆಲೆಬಾಳುವ ಮೊಬೈಲ್ ಖರೀದಿಸಿ ಅದರಲ್ಲಿ ಇರುವ ಆಫ್ ಮೂಲಕ ಯುವಕರೊಡಗೂಡಿ ಇಂತಹ ದುಷ್ಕøತ್ಯ ನಡೆಸುವ ಬಗ್ಗೆ ಬೆಳಕಿಗೆ ಬಂದಿದ್ದು ಈ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು ಸ್ಥಳೀಯರು ಪೊಳ್ಳು ಸುದ್ದಿ ವದಂತಿಗಳಿಗೆ ಭಯಪಡಬೇಕಾಗಿಲ್ಲ ಎಂದು ಕಾನೂನು ಪಾಲಕರು ತಿಳಿಸಿದ್ದಾರೆ. ಇಂತಹ ಫೇಕ್ ಚಿತ್ರ ನಿರ್ಮಿಸುವವರ ಹಾಗೂ ವಾಟ್ಸಫ್ ನಲ್ಲಿ ಫಾವರ್ಡ್ ಮಾಡುವವರ ವಿರುದ್ಧವೂ ಸಾಮಾಜಿಕ ಹಿತ ದೃಷ್ಠಿಯಿಂದ ಕಠಿಣ ಕ್ರಮ ಜರುಗಿಸಲಾಗುವುದೆಂದು ಸೈಬರ್ ಸೆಲ್ ಅಧಿಕೃತರು ತಿಳಿಸಿದ್ದಾರೆ.




.jpg)
.jpg)
