ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಇದರ ಪೆರಿಯ ಕ್ಯಾಂಪಸ್‍ನ ಕಲಾ ಉತ್ಸವ'ಕಂಗಾಮಾ'ಕ್ಕೆ ಚಾಲನೆ ನೀಡಲಾಯಿತು.
ವಕೀಲ ಎ.ಎ. ರಹೀಮ್ ಎಂಪಿ ಉದ್ಘಾಟಿಸಿದರು. ಪ್ರಭಾರ ಉಪಕುಲಪತಿ ಪೆÇ್ರ.ವಿನ್ಸೆಂಟ್ ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪೆÇ್ರ.ಕೆ.ಅರುಣ್ ಕುಮಾರ್, ಸಾಂಸ್ಕøತಿಕ ಸಂಯೋಜಕ ಡಾ.ಕೆ. ತ್ಯಾಗೂ ಮಾತನಾಡಿದರು.ವಿದ್ಯಾರ್ಥಿ ಪರಿಷತ್ ಅಧ್ಯಕ್ಷೆ ಬಿ.ದೀಕ್ಷಿತಾ ಸ್ವಾಗತಿಸಿ, ಕಾರ್ಯದರ್ಶಿ ಅಸ್ನಾ ಸುಲ್ತಾನಾ ವಂದಿಸಿದರು. ವಿದ್ಯಾರ್ಥಿಗಳು ಸಂಗೀತ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಕ್ಯಾಂಪಸ್ ಅನ್ನು ಸಂಭ್ರಮಿಸಿದರು. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಶುಕ್ರವಾರ ಮತ್ತು ಶನಿವಾರ ನಾಲ್ಕು ಸ್ಥಳಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ.


