HEALTH TIPS

ಜಪಾನ್‌: ಜನಸಂಖ್ಯೆ ಕುಸಿತ

              ಟೋಕಿಯೊ : ಜಪಾನ್‌ನ ಎಲ್ಲ 47 ಪ್ರಾಂತ್ಯಗಳ ಜನಸಂಖ್ಯೆಯಲ್ಲಿ ದಾಖಲೆಯ ಇಳಿಕೆ ಕಂಡುಬಂದಿದೆ. ಇನ್ನೊಂದೆಡೆ ದೇಶದಲ್ಲಿ ನೆಲೆ ಕಂಡುಕೊಂಡಿರುವ ವಿದೇಶಿಯರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ.

            ಸರ್ಕಾರ ಬುಧವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶಗಳನ್ನು ವಿವರಿಸಲಾಗಿದ್ದು, ದೇಶದಲ್ಲಿ ನೆಲೆಸಿರುವ ವಿದೇಶಿಯರ ಸಂಖ್ಯೆ 30 ಲಕ್ಷದ ಗಡಿ ತಲುಪಿದೆ ಎಂದು ಹೇಳಲಾಗಿದೆ.

             ಪ್ರತಿ ವರ್ಷವೂ ಜನಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ಕಳೆದ ವರ್ಷ ಜಪಾನೀಯರ ಜನಸಂಖ್ಯೆ 12.24 ಕೋಟಿ ಇತ್ತು. ಅಂದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಜನಸಂಖ್ಯೆಯಲ್ಲಿ 8 ಲಕ್ಷ ಅಥವಾ ಶೇ 0.65ರಷ್ಟು ಕುಸಿತವಾಗಿದೆ. ಇದರೊಂದಿಗೆ ಸತತ 14ನೇ ವರ್ಷವೂ ಜನಸಂಖ್ಯೆಯಲ್ಲಿ ಇಳಿಕೆ ಕಂಡುಬಂದಂತಾಗಿದೆ ಎಂದು ಆಂತರಿಕ ವ್ಯವಹಾರಗಳು ಮತ್ತು ಸಂವಹನ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ವಿವರಿಸಲಾಗಿದೆ.

                   ಜಪಾನ್‌ನಲ್ಲಿ ನೆಲೆಸಿರುವ ವಿದೇಶಿಯರ ಜನಸಂಖ್ಯೆಯಲ್ಲಿ ಶೇ 10.7ರಷ್ಟು ಹೆಚ್ಚಳವಾಗಿದೆ. 2008ರ ನಂತರ ದೇಶದ ಜನಸಂಖ್ಯೆ ಕುಸಿಯುತ್ತಾ ಸಾಗಿದ್ದು, ಜನನ ಪ್ರಮಾಣದಲ್ಲಿನ ಇಳಿಕೆಯೇ ಇದಕ್ಕೆ ಕಾರಣ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries