HEALTH TIPS

ಜಲಸಂಪನ್ಮೂಲ ಮಾಹಿತಿ ಪಾರದರ್ಶಕವಾಗಿರಲಿ: ಡೊಭಾಲ್‌

             ಜೊಹಾನಸ್‌ಬರ್ಗ್‌: ಗಡಿಗಳ ನಡುವೆ ಹಾದುಹೋಗುವ ಜಲ ಸಂಪನ್ಮೂಲದ ಕುರಿತು ಹಂಚಿಕೆಯಾಗುವ ಮಾಹಿತಿಯಲ್ಲಿ ಪಾರದರ್ಶಕತೆ ಇರಬೇಕು. ನೀರಿನ ವಿಷಯದಲ್ಲಿ ರಾಜಕೀಯ ಮತ್ತು ಶಸ್ತ್ರಾಸ್ತ್ರಗಳ ಬಳಕೆಗೆ ಕಡಿವಾಣ ಹಾಕಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರು ಬಲವಾಗಿ ಪ್ರತಿಪಾದಿಸಿದರು.

              ಮಂಗಳವಾರ ಬ್ರಿಕ್ಸ್‌ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಲ ಸಂಪನ್ಮೂಲದ ರಕ್ಷಣೆ ಪ್ರಮುಖ ಜಾಗತಿಕ ವಿಷಯ. ಜಾಗರೂಕ ಬಳಕೆ ಮತ್ತು ಸಂರಕ್ಷಣೆ ಎಲ್ಲರ ಹೊಣೆ ಎಂದು ಹೇಳಿದರು.

                 ದಕ್ಷಿಣ ಮತ್ತು ಆಗ್ನೇಯ ಏಷ್ಯಾ ದೇಶಗಳ ಜೀವನಾಡಿಯಾಗಿರುವ ಪ್ರಮುಖ ನದಿಗಳಲ್ಲಿ ಚೀನಾ ಅಣೆಕಟ್ಟೆಗಳನ್ನು ನಿರ್ಮಿಸಿರುವ ಬಗ್ಗೆ ಹಲವು ನೀತಿ ನಿರೂಪಕರು ಕಳವಳ ವ್ಯಕ್ತಪಡಿಸಿ ಧ್ವನಿ ಎತ್ತಿದ್ದಾರೆ.

                ಭಾರತದ ಮೂಲಕ ಹರಿಯುವ ನದಿಗಳ ನೀರಿನ ಪ್ರಮಾಣದ ಅಂಕಿಅಂಶ ನೀಡುವುದನ್ನು ಚೀನಾ 2017ರಲ್ಲಿ ನಿಲ್ಲಿಸಿದ್ದು, ಕಳೆದ ವರ್ಷದಿಂದ ಮತ್ತೆ ಆರಂಭಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries