ಎರ್ನಾಕುಳಂ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಯುರ್ವೇದ ಚಿಕಿತ್ಸೆಗಾಗಿ ಕೇರಳದಲ್ಲಿ ಒಂದು ವಾರ ಕಳೆಯಲಿದ್ದಾರೆ. ಕೋಟ್ಟಕ್ಕಲ್ ಆರ್ಯ ವೈದ್ಯಶಾಲೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜೊತೆಯಲ್ಲಿದ್ದಾರೆ.
ಉಮ್ಮನ್ ಚಾಂಡಿ ಅಂತ್ಯಕ್ರಿಯೆ ಬಳಿಕ ನೇರವಾಗಿ ಮಲಪ್ಪುರಂ ತಲುಪಲು ರಾಹುಲ್ ಯೋಜಿಸಿದ್ದರು. ಆದರೆ ಅಂತ್ಯಸಂಸ್ಕಾರ ತಡವಾದ ಕಾರಣ ಗುರುವಾರ ಕೋಟ್ಟಕ್ಕಲ್ ಗೆ ಪ್ರಯಾಣ ತಡವಾಯಿತು. ರಾಹುಲ್ ಶುಕ್ರವಾರ ಬೆಳಗ್ಗೆ 10 ಕ್ಕೆ ಕೋಟ್ಟಕ್ಕಲ್ ಗೆ ಆಗಮಿಸಿದರು. ವೈದ್ಯಶಾಲಾ ಮ್ಯಾನೇಜಿಂಗ್ ಟ್ರಸ್ಟಿ ಪಿಎಂ ಮಾಧವನ್ ಕುಟ್ಟಿ ವಾರಿಯರ್ ಅವರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನಡೆಯಲಿದೆ.
ಇದೇ ವೇಳೆ, ಜಾತಿ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಸೂರತ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಹುಲ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ಪರಿಗಣಿಸಲಿದೆ. ರಾಹುಲ್ ಅನರ್ಹತೆಗೆ ಸಂಬಂಧಿಸಿದಂತೆ ಇಂದಿನ ತೀರ್ಪು ನಿರ್ಣಾಯಕವಾಗಿದೆ.


