ಕಾಸರಗೋಡು: ಪರಿಶಿಷ್ಟ ವರ್ಗದ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಪರಿಶಿಷ್ಟ ವರ್ಗ ವಿಭಾಗದಿಂದ ನಸಿರ್ಂಗ್ ಸೇರಿದಂತೆ ವಿವಿಧ ಪ್ಯಾರಾಮೆಡಿಕಲ್ ಕೋರ್ಸ್‍ಗಳು ಯಶಸ್ವಿಯಾಗಿ ಪೂರೈಸಿದ ಪರಿಶಿಷ್ಟ ವರ್ಗ ವಿಭಾಗದವರಿಂದ ' ಟ್ರೈಬಲ್ ಪ್ಯಾರಾಮೆಡಿಕ್ಸ್' ಟ್ರೈನಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಪರಿಶಿಷ್ಟ ವರ್ಗದವರಾಗಿದ್ದು, ಪದವಿ ಯಾ ಡಿಪೆÇ್ಲಮಾ (ನಸಿರ್ಂಗ್, ಫಾರ್ಮಸಿ, ಇತರೆ ಪ್ಯಾರಾಮೆಡಿಕಲ್ ಕೋರ್ಸ್) ಪಡೆದಿರಬೇಕು. ವಯಸ್ಸಿನ ಮಿತಿ 21-35 ವರ್ಷವಾಗಿದ್ದು, ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಪಿ.ಎಚ್.ಸಿಯಿಂದ ವೈದ್ಯಕೀಯ ಕಾಲೇಜುವರೆಗಿನ ಆಸ್ಪತ್ರೆಗಳಲ್ಲಿ ನೇಮಕಾತಿ ನಡೆಯಲಿದೆ. ನಿಗದಿತ ಶೈಕ್ಷಣಿಕ ಅರ್ಹತೆ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬೇಕು. ಟ್ರೈಬಲ್ ಪ್ಯಾರಾಮೆಡಿಕ್ಸ್ ಆಗಿ ನೇಮಕಗೊಂಡವರಿಗೆ ಕಾಯಂ ನೇಮಕಾತಿಗೆ ಯಾವುದೇ ಅರ್ಹತೆ ಇರುವುದಿಲ್ಲ. ನೇಮಕಾತಿ ಅವಧಿ ಒಂದು ವರ್ಷವಾಗಿದ್ದು, ನಿಗದಿತ ನಮೂನೆಯಲ್ಲಿ ಅರ್ಜಿಯಲ್ಲಿ ಜಾತಿ, ಶೈಕ್ಷಣಿಕ ಅರ್ಹತೆ, ವಯಸ್ಸು ಎಂಬಿವುಗಳನ್ನು ಸಾಬೀತುಪಡಿಸುವ ಪ್ರಮಾಣಪತ್ರಗಳ ಪ್ರತಿಗಳೊಂದಿಗೆ ಕಾಸರಗೋಡು ಟ್ರೈಬಲ್ ಡೆವೆಲಪ್ ಮೆಂಟ್ ಆಫೀಸ್ ನಲ್ಲಿ ಸಲ್ಲಿಸಬೇಕು. ಒಬ್ಬರು ಒಂದಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಬಾರದು. ಅರ್ಜಿ ಸಲ್ಲಿಸಲು ಆ. 16ಕೊನೆಯ ದಿನಾಂಕವಾಗಿರುತ್ತದೆ. ನಸಿರ್ಂಗ್ ಯಾ ಫಾರ್ಮಸಿ ಅಥವಾ ಇತರೆ ಪ್ಯಾರಾಮೆಡಿಕಲ್ ಕೋರ್ಸ್ ಪದವಿ ಅರ್ಹತೆಗೆ ಮಾಸಿಕ ಗೌರವಧನವು 18,000 ರೂ. ಆಗಿದ್ದು, ಇದೇ ಕೋರ್ಸ್‍ನಲ್ಲಿ ಡಿಪೆÇ್ಲೀಮಾ ಅರ್ಹತೆಯಾಘಿದ್ದಲ್ಲಿ 15,000 ರೂಪಾಯಿ ಲಬ್ಯವಾಗಲಿದೆ. ನೇಮಕಗೊಂಡ ಅಭ್ಯರ್ಥಿಗಳು ಆರೋಗ್ಯ ಇಲಾಖೆಯು ಕಾಲಕಾಲಕ್ಕೆ ಹೊರಡಿಸುವ ಆದೇಶಗಳಿಗೆ ಒಳಪಟ್ಟು ಕೆಲಸ ಮಾಡಲು ಬದ್ಧರಾಗಿರುತ್ತಾರೆ.
ಅರ್ಜಿ ಫಾರ್ಮ್‍ನ ಮಾದರಿ ಟ್ರೈಬಲ್ ಡೆವೆಲಪ್ ಮೆಂಟ್ ಕಛೇರಿ ಕಾಸರಗೋಡು, ಎಣ್ಮಕಜೆ, ನೀಲೇಶ್ವರ ಟ್ರೈಬಲ್ ಎಕ್ಸಟೆನ್ಶನ್ ಕಛೇರಿಗಳಿಂದ ಮತ್ತುwww.stdd.kerala.gov.in ವೆಬ್‍ಸೈಟ್‍ನಿಂದ ಪಡೆಯಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 255466, 9496070343)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

