ಕಾಸರಗೋಡು: ಗಡಿನಾಡು ಕಾಸರಗೋಡಿನ ಸಾಂಸ್ಕøತಿಕ ಕ್ಷೇತ್ರದಲ್ಲಿ ಹಲವು ಅಧ್ಯಯನ ಯೋಗ್ಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಸಂಬಂಧಿತ ಕೃತಿಗಳನ್ನಾಧರಿಸಿದ ಸಂಗೀತ ಕಛೇರಿ 'ಮಂಜು ನಾದ' ಹಾಗೂ ಸಂಗೀತ ಕಾರ್ಯಾಗಾರ ಜುಲೈ 29ರಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಸಭಾಂಗಣದಲ್ಲಿ ನಡೆಯಲಿದೆ.
ಮಣಿ ಕೃಷ್ಣ ಸ್ವಾಮಿ ಅಕಾಡಮಿಯವರ ಸಹಯೋಗದೊಂದಿಗೆ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ 2.30ಕ್ಕೆ ನಡೆಯುವ ಸಂಗೀತ ಕಾರ್ಯಗಾರವನ್ನು ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಉದ್ಘಾಟಿಸುವರು. ಈ ಸಂದರ್ಭ ಸ್ಥಳೀಯ ಸಂಗೀತ ಅಭ್ಯಾಸಿಗಳಿಗೆ ಎರಡು ಕೃತಿಗಳನ್ನು ಕಲಿಸಿಕೊಡಲಾಗುವುದು. ಸಂಜೆ 5ಕ್ಕೆ ನಡೆಯುವ ಸಂಗೀತ ಕಛೇರಿ ಯಲ್ಲಿ ಶ್ರೇಯಾ ಕೊಳತ್ತಾಯ, ಉಷಾ ರಾಮಕೃಷ್ಣ, ಮೇಧಾ ಉಡುಪ, ಶರಣ್ಯಾ ಕೆ ಯನ್ ,ಸುಮೇಧಾ ಕೆ ಯನ್ ಅವರ ಹಾಡುಗಾರಿಕೆ ನಡೆಯುವುದು. ತನ್ಮಯಿ ಉಪ್ಪಂಗಳ ವಯೊಲಿನ್, ಕೌಶಿಕ್ ರಾಮಕೃಷ್ಣ ಮೃದಂಗದಲ್ಲಿ ಸಹಕರಿಸುವರು.


