ಕಾಸರಗೋಡು: ಬಿಲ್ಡಪ್ ಕಾಸರಗೋಡು ಸೊಸೈಟಿಯ ಆಶ್ರಯದಲ್ಲಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಹುಟ್ಟೂರಿನ ಸ್ವಾಗತ ಕಾರ್ಯಕ್ರಮ ಜುಲೈ 30ರಂದು ಸಂಜೆ 5ಕ್ಕೆ ಕಾಸರಗೋಡು ವಿದ್ಯಾನಗರದಲ್ಲಿರುವ ಎಎಸ್‍ಎಪಿ ಕಮ್ಯುನಿಟಿ ಸ್ಕಿಲ್ ಪಾರ್ಕ್ ನಲ್ಲಿ ಜರುಗಲಿದೆ.
ಬಿಲ್ಡಪ್ ಕಾಸರಗೋಡು ಸೊಸೈಟಿ ಅಧ್ಯಕ್ಷ ರವೀಂದ್ರನ್ ಕನ್ನಂಕೆ ಅಧ್ಯಕ್ಷತೆ ವಹಿಸುವರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಸಮಾರಂಭ ಉದ್ಘಾಟಿಸುವರು. ಶಾಸಕರಾದ ಎನ್.ಎ.ನೆಲ್ಲಿಕುನ್ನು, ಇ.ಚಂದ್ರಶೇಖರನ್, ಸಿ.ಎಚ್.ಕುಞಂಬು, .ಎ.ಕೆ.ಎಂ.ಅಶ್ರಫ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿಬಾಲಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

.jpeg)
