HEALTH TIPS

'ಬಾಹುಬಲಿ' ಶರದ್ ಪವಾರ್ ಬೆನ್ನಿಗೆ, 'ಕಟ್ಟಪ್ಪ' ಅಜಿತ್ ಚೂರಿ: ಹರಿದಾಡುತ್ತಿವೆ ಮೀಮ್ಸ್

             ಬೆಂಗಳೂರು: ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತಂತೆ ಎನ್‌ಸಿಪಿ ಪಕ್ಷದ ನಾಯಕರಾದ ಶರದ್‌ ಪವಾರ್‌ ಹಾಗೂ ಅಜಿತ್‌ ಪವಾರ್‌ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಸ್‌ಗಳು ಹರಿದಾಡುತ್ತಿವೆ.


              ಅಜಿತ್​​ ಪವಾರ್​​ ಅವರು ಶರದ್​​ ಪವಾರ್‌ಗೆ ಮೋಸ ಮಾಡಿದ್ದಾರೆ ಎಂಬ ಪೋಸ್ಟರ್‌ಗಳು ಹರಿದಾಡುತ್ತಿವೆ.

               ಬಾಹುಬಲಿ ಸಿನಿಮಾದಲ್ಲಿ ಕಟ್ಟಪ್ಪ, ಬಾಹುಬಲಿಯನ್ನು ಬೆನ್ನಿಗೆ ಚೂರಿ ಇರಿದು ಕೊಲ್ಲುವ ಪೋಟೊವನ್ನು ಎಡಿಟ್​​ ಮಾಡಿ ಬಾಹುಬಲಿಯಾಗಿ ಶರದ್​​ ಪವಾರ್​, ಕಟ್ಟಪ್ಪನಾಗಿ ಅಜಿತ್​​ ಪವಾರ್​ ಅವರನ್ನು ಪೋಸ್ಟರ್​​ನಲ್ಲಿ ಚಿತ್ರಿಸಿದ್ದಾರೆ.

               ಮಹಾರಾಷ್ಟ್ರದ ಹಲವು ಪ್ರದೇಶಗಳು ಸೇರಿದಂತೆ ಮುಂಬೈನಲ್ಲಿ ಈ ಪೋಸ್ಟರ್‌ ಹಾಕಲಾಗಿದೆ. ಹಾಗೇ ಈ ಪೋಸ್ಟರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

              ಪ್ರಯಾಗ್‌ ಎಂಬುವರು ಯಾವುದೇ ವೆಬ್‌ ಸಿರೀಸ್‌ಗಿಂತಲೂ ಮಹಾರಾಷ್ಟ್ರ ರಾಜಕೀಯ ರೋಚಕವಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

           ಕಳೆದವಾರ ಪಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಶರದ್‌ ಪವಾರ್‌ ಭಾಗವಹಿಸಿದ್ದರು. ಅಲ್ಲಿನ ಚಿತ್ರವನ್ನು ಹಂಚಿಕೊಂಡಿರುವ ಮೊಹಿತ್‌ ಎಂಬುವರು ಅಜಿತ್‌ 'Checkmate' ಮಾಡಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ.

               ಈ ಭಾನುವಾರ ಬೋರ್‌ ಆಗುವುದನ್ನು ತಪ್ಪಿಸಿದ್ದಕ್ಕೆ ಅಜಿತ್‌ ಪವಾರ್‌ಗೆ ಧನ್ಯವಾದಗಳು ಎಂದು ಕೆಲವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries