HEALTH TIPS

ಹರ್ ಘರ್ ತಿರಂಗ: ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಇಂದಿನಿಂದ 15ರವರೆಗೆ ವಿಸ್ತೃತ ಆಚರಣೆಗಳು

           ತಿರುವನಂತಪುರ: ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಆಯೋಜಿಸಿರುವ 'ಹರ್ ಘರ್ ತಿರಂಗ' ಇಂದಿನಿಂದ 15ರವರೆಗೆ ರಾಜ್ಯದಲ್ಲಿ ವ್ಯಾಪಕವಾಗಿ ಆಚರಿಸಲಾಗುವುದು.

             ಈ ಕಾರ್ಯಕ್ರಮದ ಮೂಲಕ ದೇಶದ 20 ಕೋಟಿಗೂ ಹೆಚ್ಚು ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದರೊಂದಿಗೆ ಎಲ್ಲಾ ಸರ್ಕಾರಿ ಖಾಸಗಿ ಸಂಸ್ಥೆಗಳು ಮತ್ತು ಪ್ರಮುಖ ಕೇಂದ್ರಗಳಲ್ಲಿ ವಿಸ್ತಾರವಾದ ಆಚರಣೆಗಳನ್ನು ಆಯೋಜಿಸಲಾಗುವುದು.

          ಭಾರತದ ಸಂಸ್ಕøತಿ, ಪರಂಪರೆ ಮತ್ತು ಅಭಿವೃದ್ಧಿ ಕುರಿತ ವಿವಿಧ ಪ್ರದರ್ಶನಗಳು, ತಿರಂಗ್ ಯಾತ್ರೆ, ಸೈಕಲ್ ರ್ಯಾಲಿ, ದೇಶಭಕ್ತಿ ಗೀತೆಗಳು, ಸ್ವಾತಂತ್ರ್ಯ ಹೋರಾಟಗಾರರ ಕಥೆಗಳೊಂದಿಗೆ ಸ್ತಬ್ಧಚಿತ್ರಗಳು, ಪ್ರತಿಜ್ಞೆ, ಸ್ವಾತಂತ್ರ್ಯ ದಿನಾಚರಣೆಯ ವಿಷಯದ ಕುರಿತು ರಸಪ್ರಶ್ನೆ, ಉಪನ್ಯಾಸಗಳು ಮತ್ತು ನೃತ್ಯಗಳು ಮುಖ್ಯ ಕಾರ್ಯಕ್ರಮಗಳಾಗಿವೆ. hಣಣಠಿs://hಚಿಡಿgಚಿಡಿಣiಡಿಚಿಟಿgಚಿ.ಛಿom/ 'ಫ್ಲಾಗ್ ಅನ್ನು ಪಿನ್ ಮಾಡಲು', 'ಫ್ಲಾಗ್‍ನೊಂದಿಗೆ ಸೆಲ್ಫಿ' ಪೋಸ್ಟ್ ಮಾಡಲು ಮತ್ತು ಪ್ರಮಾಣಪತ್ರವನ್ನು ಡೌನ್‍ಲೋಡ್ ಮಾಡಲು ಸೌಲಭ್ಯವನ್ನು ಒದಗಿಸುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries