ತಿರುವನಂತಪುರಂ: ಅಟ್ಟುಕ್ಕಾಲ್ ಸನ್ನಿಧಿಗೆ ಇಂದು ಸುಮಾರು 200 ಮಹಿಳೆಯರು ತಿರುವಾದಿರ ಪೂಜೆಗೆ ಆಗಮಿಸಿದ್ದರು. ಹಾಡಿನ ಮಾಧುರ್ಯದೊಂದಿಗೆ 200 ಮಂದಿ ತಿರುವಾದಿರÀಕ್ಕೆ ದೇವಸ್ಥಾನದ ಅಂಗಳದಲ್ಲಿ ಹೆಜ್ಜೆ ಹಾಕಿದ್ದು, ನೋಡುಗರಿಗೆ ಅದ್ಭುತ ದೃಶ್ಯ ಅನುಭವವಾಯಿತು.
ಚಟ್ಟಂಬಿಸ್ವಾಮಿ ಸಾಂಸ್ಕøತಿಕ ಸಮಿತಿ ನೇತೃತ್ವದ ತಂಡವು ಆಟ್ಟುಕ್ಕಾÀಲ್ ದೇವಸ್ಥಾನದ ಮುಂಭಾಗದಲ್ಲಿ ತಿರುವಾದಿರ ಆಯೋಜಿಸಿತ್ತು. ಶ್ರೀ ವಿದ್ಯಾಧಿರಾಜ ಚಟ್ಟಂಬಿ ಸ್ವಾಮಿಗಳ ಸಮಾಧಿ ಶತಮಾನೋತ್ಸವದ ನಿಮಿತ್ತ ತಿರುವಾದಿರವನ್ನು ಪ್ರದರ್ಶಿಸಲಾಯಿತು.
ಚಟ್ಟಂಬಿ ಸ್ವಾಮಿ ಕುರಿತು ಮಾಜಿ ಮುಖ್ಯ ಕಾರ್ಯದರ್ಶಿ ಆರ್. ರಾಮಚಂದ್ರನ್ ಅವರು ತಿರುವಾದಿರಕ್ಕೆ ಗೀತರಚನೆ ಮಾಡಿ ವೇದಿಕೆ ಸಜ್ಜುಗೊಳಿಸಿದರು. ಪ್ರೊ. ಕೆ ಆರ್ ಶ್ಯಾಮ ಸಾಹಿತ್ಯ ಹಾಡಿದ್ದಾರೆ. ನಗರದ ವಿವಿಧ ನೃತ್ಯ ಶಾಲೆಗಳ ತಂಡವೊಂದರ ನೇತ್ವದಲ್ಲಿ ತಿರುವಾದಿರ ವಿವಿಧ ವಯೋಮಾನದ ಸುಮಾರು ಇನ್ನೂರು ಮಂದಿ ಇದ್ದರು. ವರ್ಷಪೂರ್ತಿ ಶತಮಾನೋತ್ಸವ ಆಚರಣೆ ಮೇ 5ರಂದು ಆರಂಭವಾಯಿತು.


