HEALTH TIPS

ಮದ್ಯ ಸೇವಿಸದ ಶೇ 38ರಷ್ಟು ಭಾರತೀಯರಲ್ಲಿ ಫ್ಯಾಟಿ ಲಿವರ್ ಸಮಸ್ಯೆ! ಕಾರಣ ಏನು?

               ನವದೆಹಲಿ: ಅಲ್ಕೋಹಾಲ್‌ ಸೇವಿಸದ ಭಾರತೀಯರ ಪೈಕಿ ಶೇ 38ರಷ್ಟು ಜನರಲ್ಲಿ ಫ್ಯಾಟಿ ಲಿವರ್ (ಪಿತ್ತ ಜನಕಾಂಗದಲ್ಲಿ ಕೊಬ್ಬು ಸೇರಿಕೊಳ್ಳುವುದು) ಕಾಯಿಲೆ ಇದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್‌) ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.

                 ಈ ವಿದ್ಯಮಾನ ವಯಸ್ಕರಿಗೆ ಮಾತ್ರ ಸೀಮಿತವಾಗಿಲ್ಲ, ಶೇ 35ರಷ್ಟು ಮಕ್ಕಳಲ್ಲಿಯೂ ಈ ತೊಂದರೆ ಇದೆ ಎಂದೂ ಅಧ್ಯಯನ ಹೇಳಿದೆ. 'ಜರ್ನಲ್‌ ಆಫ್ ಕ್ಲಿನಿಕಲ್ ಅಂಡ್ ಎಕ್ಸಪರಿಮೆಂಟಲ್ ಹೆಪಟಾಲಜಿ' ಎಂಬ ನಿಯತಕಾಲಿಕದಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

                  ಈ ಕಾಯಿಲೆಯನ್ನು 'ನಾನ್‌ ಅಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್' (ಎನ್‌ಎಎಫ್‌ಎಲ್‌ಡಿ) ಎಂದು ಕರೆಯಲಾಗುತ್ತದೆ. ಯಾವುದೇ ಲಕ್ಷಣಗಳು ಗೋಚರಿಸದ ಕಾರಣ ಆರಂಭಿಕ ಹಂತದಲ್ಲಿ ಈ ಕಾಯಿಲೆ ಪತ್ತೆಯಾಗುವುದಿಲ್ಲ. ಕ್ರಮೇಣ ಉಲ್ಬಣಿಸಿ, ರೋಗಿಗಳಲ್ಲಿ ತೀವ್ರ ತೊಂದರೆಗೆ ಕಾರಣವಾಗುತ್ತದೆ.

'ಎನ್‌ಎಎಫ್‌ಎಲ್‌ಡಿ'ಗೆ ಕಾರಣಗಳು

* ಪಾಶ್ಚಾತ್ಯ ಆಹಾರಪದ್ಧತಿ ಅನುಕರಣೆ

* ಅತಿಯಾದ ಫಾಸ್ಟ್‌ಫುಡ್‌ಗಳ ಸೇವನೆ

* ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಕಡಿಮೆ ಮಾಡುವುದು

* ಅನಾರೋಗ್ಯಕರ ಮತ್ತು ವ್ಯಾಯಾಮ ಇರದ ಜೀವನಶೈಲಿ

* ಅಂಗಡಿಗಳಲ್ಲಿ ಸುಲಭವಾಗಿ ಸಿಗುವ (ಒವರ್‌ ದಿ ಕೌಂಟರ್‌) ಔಷಧಗಳ ಸೇವನೆಯೂ ಕೆಲವೊಮ್ಮೆ ಪಿತ್ತಜನಕಾಂಗಕ್ಕೆ ಹಾನಿ ಮಾಡುವುದು

ಪರಿಹಾರಗಳೇನು

* ಆರೋಗ್ಯಕರ ಜೀವನ ಶೈಲಿ ಅಳವಡಿಕೆ

* ಬೊಜ್ಜು ಇರುವವರು ತೂಕ ಕಡಿಮೆ ಮಾಡಿಕೊಳ್ಳುವುದು

* ಜಂಕ್‌ ಮತ್ತು ಸಕ್ಕರೆ ಅಂಶ ಇರುವ ಆಹಾರಗಳ ಮಿತ ಸೇವನೆ

* ನಿಯಮಿತ ವ್ಯಾಯಾಮ

                    ಡಾ.ಅನೂಪ್‌ ಸರಾಯ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಎಐಐಎಂಎಸ್‌ಸದ್ಯ 'ಫ್ಯಾಟಿ ಲಿವರ್' ಕಾಯಿಲೆಗೆ ಅನುಮೋದಿತ ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಆದರೆ ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿ ಅಳವಡಿಕೆಯಿಂದ ಈ ಕಾಯಿಲೆಯಿಂದ ಹೊರಬರಬಹುದು. ಸ್ವಯಂ ಆಗಿ ಔಷಧಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries