HEALTH TIPS

ಮಂಜೇಶ್ವರ ತಾಲೂಕು ಕಚೇರಿ ಡೆಪ್ಯೂಟಿ ತಹಶಿಲ್ದಾರ್ ಅರೆಮಂಗಿಲ ಸುಬ್ಬಣ್ಣ ನಾಯ್ಕ ಅಸೌಖ್ಯದಿಂದ ನಿಧನ

                       ಪೆರ್ಲ : ಮಂಜೇಶ್ವರ ತಾಲೂಕು ಕಚೇರಿ ಡೆಪ್ಯೂಟಿ ತಹಶಿಲ್ದಾರ್ ಅರೆಮಂಗಿಲ ಸುಬ್ಬಣ್ಣ ನಾಯ್ಕ ಪಿ. (53) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ತಡ ರಾತ್ರಿ ನಿಧನರಾದರು. ತೀವ್ರ ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದ ಇವರು ತಮ್ಮ ಸ್ವಗೃಹ ಅರೆಮಂಗಿಲದ ಮನೆಯಲ್ಲಿ ನಿಧನರಾಗಿದ್ದಾರೆ.

                       ಪಳ್ಳಕಾನ ನಿವಾಸಿಗಳಾಗಿದ್ದ ದಿ.ರಾಮನಾಯ್ಕ - ಕಾವೇರಿ ದಂಪತಿಗಳ ಪುತ್ರರಾಗಿದ್ದ ಸುಬ್ಬಣ್ಣ ನಾಯ್ಕ ಆರಂಭದಲ್ಲಿ ಕೆಎಸ್ಸಾರ್ಟಿಸಿ ಇಲಾಖೆಯಲ್ಲಿ ಸರಕಾರಿ ಸೇವೆಗೆ ನಿಯುಕ್ತರಾಗಿ ಬಳಿಕ ಕಂದಾಯ ಇಲಾಖೆಯ ವಿಲೇಜ್ ಆಫೀಸರ್ ಆಗಿ ವಿವಿಧ ಕಡೆಗಳಲ್ಲಿ ಸೇವೆಗೈದಿದ್ದಾರೆ. ಶೇಣಿ, ಪೆರ್ಲ,ಕಾಟುಕುಕ್ಕೆ,ಬಾಯಾರು,ಮೀಂಜ ಮೊದಲಾದ ಕಡೆಗಳಲ್ಲಿ ವಿಲೇಜ್ ಅಧಿಕಾರಿಯಾಗಿದ್ದ ಇವರು ಬಳಿಕ ಮಂಜೇಶ್ವರ ತಾಲೂಕು ಕಚೇರಿ ಡೆಪ್ಯೂಟಿ ತಹಶಿಲ್ದಾರ್ ಆಗಿ ಭಡ್ತಿ ಹೊಂದಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಭವಾನಿ, ಮಕ್ಕಳಾದ ಜಿತಿನ್ ಎಸ್, ನಿವೇದ್ ಹಾಗೂ ಸಹೋದರರಾದ ಈಶ್ವರ ನಾಯ್ಕ, ಗಣೇಶ (ಕೇರಳ ಗ್ರಾಮೀಣ ಬ್ಯಾಂಕ್ ಉದ್ಯೋಗಿ), ಸಹೋದರಿಯರಾದ ದೇವಕಿ,ಗೌರಿ ಎಂಬಿವರನ್ನಗಲಿದ್ದಾರೆ. ಮನೆ ಸಮೀಪ ಸಂಸ್ಕಾರ ಕಾರ್ಯ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries