HEALTH TIPS

ಮಣಿಪುರ ಕುರಿತು ಚರ್ಚೆ: ಪ್ರತಿಭಟಿಸಿದ ಬಿಜೆಪಿ ಶಾಸಕರನ್ನು ಹೊರಹಾಕಿದ ಮಾರ್ಷಲ್‌ಗಳು

              ವದೆಹಲಿ: ದೆಹಲಿ ವಿಧಾನಸಭೆಯಲ್ಲಿ ಮಣಿ‍ಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುವುದನ್ನು ವಿರೋಧಿಸಿ ಗುರುವಾರ ಪ್ರತಿಭಟಿಸಿದ ಬಿಜೆಪಿಯ ನಾಲ್ವರು ಶಾಸಕರನ್ನು ಹೊರಹಾಕಲಾಗಿದೆ.

                   ಎಎಪಿ ಶಾಸಕ ದುರ್ಗೇಶ್‌ ಪಾಠಕ್‌ ಅವರು ಸದನದಲ್ಲಿ ಮಣಿಪುರಕ್ಕೆ ಸಂಬಂಧಿಸಿದಂತೆ ಚರ್ಚೆ ಆರಂಭಿಸಿದರು.

                  ಇದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದರು. ದೆಹಲಿಗೆ ಸಂಬಂಧಿಸಿದ ವಿಚಾರಗಳನ್ನು ಮಾತ್ರವೇ ಚರ್ಚಿಸಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದರು.

               ಶಾಸಕರ ಪ್ರತಿಭಟನೆಯನ್ನು ಪ್ರಶ್ನಿಸಿದ ಉಪ ಸಭಾಪತಿ ರಾಖಿ ಬಿರ್ಲಾ, 'ಮಣಿಪುರ ಸಮಸ್ಯೆಯು ಸದನದಲ್ಲಿ ಚರ್ಚಿಸುವಂತಹ ವಿಚಾರವಲ್ಲ ಎಂದು ಭಾವಿಸಿದ್ದೀರಾ. ಉತ್ತರ ಪ್ರದೇಶ ವಿಧಾನಸಭೆಯಲ್ಲಿಯೂ ಮಣಿಪುರ ವಿಚಾರ ಚರ್ಚೆಯಾಗಿದೆ' ಎಂದರು.

               ಆದಾಗ್ಯೂ ಬಿಜೆಪಿ ಶಾಸಕರಾದ ಆಭಯ್ ವರ್ಮಾ, ಜಿತೇಂದರ್‌ ಮಹಾಜನ್‌, ಅಜಯ್‌ ಮಹಾವರ್‌ ಮತ್ತು ಒ.ಪಿ. ಶರ್ಮಾ ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಮಾರ್ಷಲ್‌ಗಳ ಮೂಲಕ ಅವರನ್ನು ಸದನದಿಂದ ಹೊರಗೆ ಕಳುಹಿಸಲಾಯಿತು.

                  ಪಾಠಕ್‌ ಅವರು, ಮಣಿಪುರ ವಿಚಾರವಾಗಿ ಚರ್ಚೆ ನಡೆಸುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದು ದುರದೃಷ್ಟಕರ ಎಂದು ಟೀಕಿಸಿದರು. ಇದೇ ವೇಳೆ ಎಎಪಿ ಶಾಸಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries