ಬದಿಯಡ್ಕ: ಭೂಮಿ ಸದಾ ಹಸಿರಾಗಿರಬೇಕು, ಫಲವೃಕ್ಷಗಳು ಮನೆಮನೆಯಲ್ಲಿ ಬೆಳೆಯಬೇಕು ಎಂಬ ಉದ್ದೇಶದೊಂದಿಗೆ ರೋಟರಿ ಬದಿಯಡ್ಕ ವತಿಯಿಂದ ವಿವಿಧ ಮನೆಗಳಿಗೆ ತೆರಳಿ ಗಿಡನೆಟ್ಟು ಭಾರತದ ಸ್ವಾತಂತ್ರೋತ್ಸವದ ಸಂದೇಶವನ್ನು ಸಾರಲಾಯಿತು. ಅಧ್ಯಕ್ಷ ರಾಧಾಕೃಷ್ಣ ಪೈ ಈ ಸಂದಭರ್À ಮಾತನಾಡಿ ಪ್ರಕೃತಿಯನ್ನು ನಾವು ರಕ್ಷಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಎಲ್ಲಾ ಜೀವಿಗಳಿಗೂ ಗಿಡಮರಗಳು ಅತೀ ಅಗತ್ಯ. ಈ ನಿಟ್ಟಿನಲ್ಲಿ ರೋಟರಿ ವತಿಯಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯದರ್ಶಿ ರಾಘವೇಂದ್ರ ಬದಿಯಡ್ಕ, ಕೋಶಾಧಿಕಾರಿ ಕೇಶವ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

.jpg)
