ನವದೆಹಲಿ: ಹಿಂಸಾಚಾರ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ನೈಗರ್ ದೇಶ ತೊರೆಯುವಂತೆ ಭಾರತೀಯರಿಗೆ ಭಾರತ ಸರ್ಕಾರ ಸಲಹೆ ನೀಡಿದೆ.
ಮಿಲಿಟರಿ ದಂಗೆ ಎದ್ದಿರುವ ನೈಗರ್‌ನಲ್ಲಿ ನೆಲೆಸಿರುವ ಭಾರತೀಯರು ಸಾಧ್ಯವಾದಷ್ಟು ಬೇಗ ಆ ದೇಶ ತೊರೆಯಿರಿ ಎಂದು ವಿದೇಶಾಂಗ ಸಚಿವಾಲಯವು ಸಲಹೆಯಲ್ಲಿ ತಿಳಿಸಿದೆ.
ನೈಗರ್‌ನ ಹೊಸ ಮಿಲಿಟರಿ ಆಡಳಿತ ಮತ್ತು ಕ್ಷೀಣಿಸುತ್ತಿರುವ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಸೇನೆಯನ್ನು ನಿಯೋಜಿಸಲು ಆದೇಶಿಸಿದ್ದ ಪಶ್ಚಿಮ ಆಫ್ರಿಕಾದ ಪ್ರಾದೇಶಿಕ ಬಣದ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ.
ಹೊರಹಾಕಲ್ಪಟ್ಟ ಅಧ್ಯಕ್ಷ ಮೊಹಮ್ಮದ್ ಬಜೌಮ್ ಅವರನ್ನು ಮರಳಿ ಅಧಿಕಾರಕ್ಕೆ ತರಲು ನೀಡಲಾಗಿದ್ದ ಭಾನುವಾರದ ಗಡುವು ಮುಗಿದ ನಂತರ ನೈಗರ್‌ನಲ್ಲಿ ಸಂವಿಧಾನದ ಆದೇಶಗಳನ್ನು ಪುನಃಸ್ಥಾಪಿಸಲು ಸೇನೆ ಸಿದ್ಧವಿರುವಂತೆ ಪಶ್ಚಿಮ ಆಫ್ರಿಕಾ ದೇಶಗಳ ಆರ್ಥಿಕ ಸಮುದಾಯ(ಇಸಿಒಡಬ್ಲ್ಯುಎಸ್) ಸೂಚಿಸಿತ್ತು.
ಆಡಳಿತವನ್ನು ಮರುಸ್ಥಾಪಿಸಲು ನೆರೆಯ ರಾಷ್ಟ್ರಗಳು ಪ್ರಯತ್ನಿಸಿದರೆ ಜೌಮ್ ಅನ್ನು ಕೊಲ್ಲುವುದಾಗಿ ಸೇನಾಧಿಕಾರಿ ಬೆದರಿಕೆ ಹಾಕಿರುವುದಾಗಿ ಅಮೆರಿಕ ಉನ್ನತ ರಾಜತಾಂತ್ರಿಕ ಅಧಿಕಾರಿ ತಿಳಿಸಿದ್ದಾರೆ.


