HEALTH TIPS

ಕೇರಳ ನಂಬರ್ ಒನ್ ಆತ್ಮಹತ್ಯೆ ಹಾಟ್‍ಸ್ಪಾಟ್; ದಶಕದಲ್ಲಿ ಆತ್ಮಹತ್ಯೆಗಳಲ್ಲಿ 20 ಪ್ರತಿಶತ ಹೆಚ್ಚಳ; ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇಕಡಾ 79 ರಷ್ಟು ಮಹಿಳೆಯರು

                  ಕೋಝಿಕ್ಕೋಡ್: ನಂಬರ್ ಒನ್ ರಾಜ್ಯವಾದ ಕೇರಳದಲ್ಲಿ ಕಳೆದ ದಶಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.20ರಷ್ಟು ಹೆಚ್ಚಳವಾಗಿದೆ. 2012ರಲ್ಲಿ 8,490 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, 2022ರಲ್ಲಿ 10,162 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

             2022 ರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ 79 ಪ್ರತಿಶತ ಮಹಿಳೆಯರು. ನಂಬರ್ ಒನ್ ಕೇರಳವು ಬದುಕಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುವವರ ಸ್ವರ್ಗವಾಗಿದೆ. ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ವಿವಿಧ ಸಮಸ್ಯೆಗಳಿಂದ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.

               2020 ರಲ್ಲಿ ಕೇರಳದಲ್ಲಿ 8497 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದು 2021 ರಲ್ಲಿ 9547 ಮತ್ತು 2022 ರಲ್ಲಿ 10,162 ಕ್ಕೆ ಹೆಚ್ಚಳವಾಗಿದೆ. ಸರ್ಕಾರದ ಪ್ರಕಾರ, ಕೋವಿಡ್ -19 ನಿಂದ ಉಂಟಾದ ಮಾನಸಿಕ ಒತ್ತಡ, ಒಂಟಿತನ, ಆರ್ಥಿಕ ಬಿಕ್ಕಟ್ಟು ಮತ್ತು ಉದ್ಯೋಗ ನಷ್ಟವು ಆತ್ಮಹತ್ಯೆ ದರ ಏರಿಕೆಗೆ ಕಾರಣವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇಕಡ 56ರಷ್ಟು ಮಂದಿ 45 ವರ್ಷ ಮೇಲ್ಪಟ್ಟವರು ಎಂಬುದು ಕೂಡ ಗಮನಾರ್ಹ. ಇದು ಒಂಟಿತನ, ಆರ್ಥಿಕ ಸ್ವಾವಲಂಬನೆಯ ಕೊರತೆ, ರೋಗಗಳು ಮತ್ತು ಕುಟುಂಬದಿಂದ ಪ್ರತ್ಯೇಕಗೊಂಡಿರುವ ಸಂಕಷ್ಟ ಸೂಚಿಸುತ್ತದೆ. 40 ರಷ್ಟು ಆತ್ಮಹತ್ಯೆಗಳು 15 ರಿಂದ 45 ವರ್ಷ ವಯಸ್ಸಿನವರಲ್ಲಿ ಸಂಭವಿಸುತ್ತವೆ. 2022 ರಲ್ಲಿ 48 ರಷ್ಟು ಆತ್ಮಹತ್ಯೆಗಳು ಕೌಟುಂಬಿಕ ಕಲಹಗಳಿಂದಾಗಿ ಸಂಭವಿಸಿವೆ. 17 ರಷ್ಟು ಆತ್ಮಹತ್ಯೆಗಳು ಮಾನಸಿಕ ಸಮಸ್ಯೆಗಳಿಂದ ಮತ್ತು ಶೇಕಡಾ 14 ರಷ್ಟು ದೈಹಿಕ ಸಮಸ್ಯೆಗಳಿಂದಾಗಿ ಸಂಭವಿಸುತ್ತವೆ. 78 ರಷ್ಟು ಜನರು ನೇಣು ಹಾಕುವಿಕೆ ಆರಿಸಿಕೊಂಡಿರುವÀರು.

              ಕಳೆದ ವರ್ಷ ನಾಲ್ಕು ಕುಟುಂಬ ಆತ್ಮಹತ್ಯೆ ಮಾಡಿಕೊಂಡಿತ್ತು. ಇದರಲ್ಲಿ 11 ಮಂದಿ ಭಾಗಿಯಾಗಿದ್ದರು. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇಕಡಾ 88 ರಷ್ಟು ಮಂದಿ ಪ್ಲಸ್ ಟುಗಿಂತ ಕಡಿಮೆ ಶಿಕ್ಷಣ ಪಡೆದಿದ್ದಾರೆ. 7.5 ರಷ್ಟು ಪದವೀಧರರು ಮತ್ತು ವೃತ್ತಿಪರ ಅರ್ಹತೆ ಹೊಂದಿರುವವರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅಂಕಿಅಂಶಗಳು ಸೂಚಿಸುತ್ತವೆ.

                ಆತ್ಮಹತ್ಯೆಯ ರಾಜಧಾನಿಯೂ ಕೇರಳದ ರಾಜಧಾನಿಯೇ. ತಿರುವನಂತಪುರ ಜಿಲ್ಲೆ ಮುಂದಿದೆ. 44 ಜನರು ಸಾವನ್ನಪ್ಪಿದ್ದಾರೆ. ಮಲಪ್ಪುರಂ ಅತ್ಯಂತ ಕಡಿಮೆ--11. ಕೇರಳದ ಆತ್ಮಹತ್ಯೆ ಪ್ರಮಾಣವು 2021 ರಲ್ಲಿ ರಾಷ್ಟ್ರೀಯ ಸರಾಸರಿ 11.3 ಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಪ್ರೇಮ ನಿವೇದನೆ  ತಿರಸ್ಕರಿಸಿದ ಗೆಳೆಯರು ಹುಡುಗಿಯರನ್ನು ಕೊಂದು ಹಾಕುತ್ತಿರುವ ಘಟನೆಗಳೂ ಇತ್ತೀಚೆಗೆ ಕೇರಳದಲ್ಲಿ ಹೆಚ್ಚುತ್ತಿವೆ. ಒಂದು ಆತ್ಮಹತ್ಯೆ ಸಂಭವಿಸಿದಾಗ, 20 ಪಟ್ಟು ಹೆಚ್ಚು ಆತ್ಮಹತ್ಯೆ ಪ್ರಯತ್ನಗಳು ಸಂಭವಿಸುತ್ತವೆ ಎಂದು ಅಧ್ಯಯನಗಳು ತೋರಿಸುತ್ತವೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries