HEALTH TIPS

2024ರ ಆಸ್ಕರ್‌ಗೆ ಸ್ಪರ್ಧಿಸಲು '2018' ಮಲಯಾಳಂ ಸಿನಿಮಾ ಭಾರತದಿಂದ ಅಧಿಕೃತ ಪ್ರವೇಶ

              ಚೆನ್ನೈ: ಭಾರತದಿಂದ 2024 ರ ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸಲು ಮಲಯಾಳಂನ '2018- ಎವರಿವನ್ ಇಸ್ ಎ ಹೀರೊ' ಸಿನಿಮಾ ಅಧಿಕೃತವಾಗಿ ಪ್ರವೇಶ ಪಡಿದಿದೆ.

                ಈ ವಿಷಯನ್ನು ಇಂದು ಚೆನ್ನೈನಲ್ಲಿ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಪ್ರಕಟಿಸಿತು. ಫೆಡರೇಷನ್ ಪರವಾಗಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆಯ್ಕೆ ಸಮಿತಿ ಅಧ್ಯಕ್ಷ ಗಿರೀಶ್ ಕಾಸರವಳ್ಳಿ ಅವರು, 16 ಜನ ಜ್ಯೂರಿಗಳಿರುವ ತಂಡ 2018 ಸಿನಿಮಾವನ್ನು ಅವಿರೋಧವಾಗಿ ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.

                2024ರ ಆಸ್ಕರ್ ಪ್ರಶಸ್ತಿಯ (Academy Awards) 'ಅತ್ಯುತ್ತಮ ಅಂತರರಾಷ್ಟ್ರೀಯ ವೈಶಿಷ್ಟ್ಯದ ಚಿತ್ರ' ವಿಭಾಗಕ್ಕೆ 2018 ಸಿನಿಮಾವನ್ನು ಕಳುಹಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.

ಒಂದು ವಾರದಲ್ಲಿ ಆಯ್ದ 22 ಚಿತ್ರಗಳನ್ನು ವೀಕ್ಷಿಸಿ ಈ ಚಿತ್ರವನ್ನು ಆಯ್ಕೆ ಮಾಡಲಾಯಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರಗಳನ್ನು ಆಯ್ಕೆ ಮಾಡಲಾಗಿತ್ತು. 'ಕೆಟ್ಟ ಪರಿಸ್ಥಿತಿಯಲ್ಲಿ ಭಾರತೀಯರು ಮತ್ತು ಅವರ ನೈತಿಕತೆಯನ್ನು ಈ ಸಿನಿಮಾ ಎತ್ತಿ ತೋರಿಸುತ್ತದೆ' ಎಂದು ಹೇಳಿದರು.


              2023 ರ ಮೇ 5 ರಂದು ಬಿಡುಗಡೆಯಾಗಿರುವ 2018 ಎಂಬ ಮಲಯಾಳಂ ಚಿತ್ರವನ್ನು ಜೂಡ್ ಆಂಟನಿ ಜೋಸೆಫ್ ನಿರ್ದೇಶನ ಮಾಡಿದ್ದಾರೆ. ತೋವಿನ್ ಥಾಮಸ್, ತನ್ವಿ ರಾಮ್ ಪ್ರಮುಖ ತಾರಾಗಣದಲ್ಲಿದ್ದಾರೆ. ವೇಣು ಕುಣ್ಣಾಪಿಳ್ಳಿ ಇತರರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಕಮರ್ಷಿಯಲ್ ಆಗಿಯೂ ದೊಡ್ಡ ಯಶಸ್ಸು ಕಂಡಿದ್ದು ₹ 200 ಕೋಟಿಗೂ ಅಧಿಕ ಗಳಿಕೆ ಮಾಡಿದೆ. 2018 ರಲ್ಲಿ ಕೇರಳದಲ್ಲಿ ಉಂಟಾಗಿದ್ದ ಭಾರಿ ಪ್ರವಾಹದಲ್ಲಿ ಜನರ ಸೆಣಸಾಟ, ಮಾನವೀಯತೆ, ನೈತಿಕತೆ ಬಗೆಗಿನ ಕಥೆಯನ್ನು ಇದು ಹೊಂದಿದೆ.

                   ಕಳೆದ ವರ್ಷ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾದ ವತಿಯಿಂದ ಗುಜರಾತಿ ಸಿನಿಮಾ Chhello Show ಅನ್ನು ಕಳುಹಿಸಿ ಕೊಡಲಾಗಿತ್ತು. ಆದರೆ ‍ಪ್ರಶಸ್ತಿ ಪಡೆದಿರಲಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸಿದ್ದ RRR ಚಿತ್ರ ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಹಾಗೂ ಅತ್ಯುತ್ತಮ ಡಾಕ್ಯುಮೆಂಟರಿ ವಿಭಾಗದಲ್ಲಿ The Elephant Whisperers ಆಸ್ಕರ್ ಪ್ರಶಸ್ತಿ ಪಡೆದಿದ್ದವು.

                 2024 ನೇ ಸಾಲಿನ ಆಸ್ಕರ್ ಪ್ರಶಸ್ತಿ ವಿತರಣೆ ಸಮಾರಂಭ ಮುಂದಿನ ವರ್ಷ ಮಾರ್ಚ್ 10 ರಂದು ಲಾಸ್ ಏಂಜಲೀಸ್‌ನಲ್ಲಿ ಆಯೋಜನೆಗೊಂಡಿದೆ.

                 ಸುದ್ದಿಗೋಷ್ಠಿಯಲ್ಲಿ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ರವಿ ಕೊಟ್ಟಾರ್‌ಕರ್ ಇದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries