HEALTH TIPS

UPI ವಹಿವಾಟಿನಲ್ಲಿ Google Pay ಅನ್ನು ಹಿಂದಿಕ್ಕಿದ Paytm

              ಬೆಂಗಳೂರು: UPI ವಹಿವಾಟುಗಳಲ್ಲಿನ ಪರಿಮಾಣ ಮತ್ತು ಮೌಲ್ಯ ಎರಡರಲ್ಲೂ Google Pay ಅನ್ನು Paytm ಹಿಂದಿಕ್ಕಿದೆ. ವಹಿವಾಟಿನ ಪರಿಮಾಣದ ವಿಷಯದಲ್ಲಿ Google Pay ನ ಮಾರುಕಟ್ಟೆ ಪಾಲು 2022ರ ಜೂನ್ ನಲ್ಲಿ ಶೇಕಡ 34 ರಿಂದ 2023ರ ಜೂನ್ ನಲ್ಲಿ ಶೇಕಡ 13.8ಕ್ಕೆ ಇಳಿದಿದೆ.

                 ಇಂದು ಬಿಡುಗಡೆಯಾದ ವರ್ಲ್ಡ್‌ಲೈನ್‌ನ ಇಂಡಿಯಾ ಡಿಜಿಟಲ್ ಪಾವತಿಗಳ ವರದಿ H1 2023ರ ಪ್ರಕಾರ, Paytm ಇದೇ ಅವಧಿಯಲ್ಲಿ ಶೇಕಡ 14.7 ರಿಂದ 34.6ಕ್ಕೆ ಮಾರುಕಟ್ಟೆ ಪಾಲನ್ನು ಗಳಿಸಿದೆ. ವಹಿವಾಟಿನ ಮೌಲ್ಯಕ್ಕೆ ಸಂಬಂಧಿಸಿದಂತೆ, Paytm ಅದೇ ಅವಧಿಯಲ್ಲಿ ಶೇಕಡ 9.9ರಿಂದ 33ಕ್ಕೆ ಗಮನಾರ್ಹ ಏರಿಕೆ ಕಂಡಿದೆ. ಮತ್ತೊಂದೆಡೆ, Google Pay ಶೇಕಡ 34.6ರಿಂದ 10.9ಕ್ಕೆ ಇಳಿದಿದೆ.

                 PhonePe ಯುಪಿಐ ವಹಿವಾಟಿನಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದ್ದು ಮಾರುಕಟ್ಟೆಯ ದಿಗ್ಗಜನಾಗಿ ಉಳಿದಿದೆ. ಒಟ್ಟು ಮೌಲ್ಯದ ಪ್ರಕಾರ ಅದರ ಮಾರುಕಟ್ಟೆ ಪಾಲು 2023ರ ಜೂನ್ ನಲ್ಲಿ ಶೇಕಡ 49.8ರಷ್ಟಿದೆ. ಮೂರು ಅಪ್ಲಿಕೇಶನ್‌ಗಳು ಜೂನ್ 2023 ರಲ್ಲಿ ಎಲ್ಲಾ ವಹಿವಾಟುಗಳಲ್ಲಿ ಶೇಕಡ 95.68ರಷ್ಟು ಪಾಲನ್ನು ಹೊಂದಿವೆ. 

                 2022ರ ಜನವರಿಯಲ್ಲಿ 885 ರೂ.ಗಳಿದ್ದ UPI ವ್ಯಕ್ತಿಯಿಂದ ವ್ಯಾಪಾರಿ (P2M) ವಹಿವಾಟಿನ ಸರಾಸರಿ ಟಿಕೆಟ್ ಗಾತ್ರವು (ATS) 2023ರ ಜೂನ್ ನಲ್ಲಿ 653 ರೂಪಾಯಿಗೆ ಇಳಿದಿದೆ. UPI ಅನ್ನು ಮೈಕ್ರೋ ವಹಿವಾಟಿಗಾಗಿ ಹೆಚ್ಚು ಬಳಸಲಾಗುತ್ತಿದೆ ಎಂದು ವರದಿ ಸೂಚಿಸುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries