ಲಖನೌ : ಉತ್ತರಪ್ರದೇಶದ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆ ಸುರಿದಿದ್ದು, 24 ಗಂಟೆಗಳ ಅವಧಿಯಲ್ಲಿ ಮಳೆ ಸಂಬಂಧಿ ಅವಘಡಗಳಲ್ಲಿ 19 ಮಂದಿ ಮೃತಪಟ್ಟಿದ್ದಾರೆ.
0
samarasasudhi
ಸೆಪ್ಟೆಂಬರ್ 12, 2023
ಲಖನೌ : ಉತ್ತರಪ್ರದೇಶದ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆ ಸುರಿದಿದ್ದು, 24 ಗಂಟೆಗಳ ಅವಧಿಯಲ್ಲಿ ಮಳೆ ಸಂಬಂಧಿ ಅವಘಡಗಳಲ್ಲಿ 19 ಮಂದಿ ಮೃತಪಟ್ಟಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿತ್ತು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಲಖನೌನ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಬಾರಾಬಂಕಿಯಲ್ಲಿ ರೈಲು ಹಳಿಗಳು ಮುಳುಗಡೆಯಾಗಿವೆ ಎಂದಿದ್ದಾರೆ.
ಹಾರ್ದೊಯಿಯಲ್ಲಿ ನಾಲ್ಕು ಮಂದಿ, ಬಾರಾಬಂಕಿಯಲ್ಲಿ ಮೂವರು, ಪ್ರತಾಪಗಢ ಮತ್ತು ಕನ್ನೌಜ್‌ನಲ್ಲಿ ತಲಾ ಇಬ್ಬರು, ಹಾಗೂ ಅಮೇಠಿ, ಡಿಯೋರಿಯಾ, ಜಲೌನ್, ಕಾನ್ಪುರ, ಉನ್ನಾವೋ, ಸಂಭಾಲ್, ರಾಂಪುರ ಮತ್ತು ಮುಜಾಫರ್‌ನಗರ ಜಿಲ್ಲೆಗಳಲ್ಲಿ ತಲಾ ಒಬ್ಬರು ಮಳೆ ಸಂಬಂಧಿ ಅವಘಡಗಳಲ್ಲಿ ಮೃತಪಟ್ಟಿರುವುದಾಗಿ ವಿವರಿಸಿದ್ದಾರೆ.