ಕಾಸರಗೋಡು: ಭಗವಂತನ ಎದುರಲ್ಲಿ ಎಲ್ಲರೂ ಸಣ್ಣವರೇ. ಮಾನವನ ಆಯುಷ್ಯ ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಇರುವಷ್ಟು ಕಾಲ ಭಗವಂತನ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಭಾಗ್ಯ ಎಂದು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಹೇಳಿದರು.
ಅವರು ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವೀ ಸಿದ್ಧತಾ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಮಧೂರು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯು.ಟಿ.ಆಳ್ವ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಉಪಾಧ್ಯಕ್ಷ ಡಾ.ಬಿ.ಎಸ್.ರಾವ್, ಬೇವಿಂಜೆ ವಿಷ್ಣು ಕಕ್ಕಿಲ್ಲಾಯ, ಗಿರೀಶ್, ನ್ಯಾಯವಾದಿ ಅನಂತರಾಮ, ಮಂಜುನಾಥ ಕಾಮತ್, ಸವಿತಾ ಟೀಚರ್ ಮೊದಲಾದವರು ಮಾತನಾಡಿದರು. ಅಪ್ಪಯ್ಯ ನಾೈಕ್, ಮುರಳಿ ಗಟ್ಟಿ, ಎ.ಮನೋಹರ, ವಿಷ್ಣು ಭಟ್, ನಾರಾಯಣಯ್ಯ ಮಧೂರು, ಗಣೇಶ್ ಪಾರೆಕಟ್ಟೆ, ಗಣೇಶ್ ಭಟ್ ಅಳಕೆ, ಪ್ರಭಾಶಂಕರ, ಸಂತೋಷ್ ಮಧೂರು, ರವೀಂದ್ರ ರೈ ಸಿರಿಬಾಗಿಲು, ಮಾಧವ ಮಾಸ್ತರ್, ಸುಕುಮಾರ ಕುದ್ರೆಪ್ಪಾಡಿ, ಶಿವರಾಮ ಕಾಸರಗೋಡು, ಜಗದೀಶ್ ಕೂಡ್ಲು, ಗುರುಪ್ರಸಾದ್ ಕೋಟೆಕಣಿ, ರಾಮ ಶೆಟ್ಟಿ ಪುಳ್ಕೂರು, ಶಶಿಕಲ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.
ನವೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಸ್ವಾಗತಿಸಿ, ಯೋಗೀಶ್ ಎಂ.ಆರ್. ಮಧೂರು ವಂದಿಸಿದರು. ಸುರೇಶ್ ನಾೈಕ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.