HEALTH TIPS

ಆದಷ್ಟು ಬೇಗ ಡೀಸೆಲ್​ ವಾಹನಗಳಿಗೆ ಗುಡ್​ಬೈ ಹೇಳಿ ಇಲ್ಲದಿದ್ದರೆ.ಕಾರು ತಯಾರಕರಿಗೆ ನಿತಿನ್​ ಗಡ್ಕರಿ ವಾರ್ನಿಂಗ್​

               ವದೆಹಲಿ: ಕಾರು ತಯಾರಕರು ತಮ್ಮ ಉತ್ಪಾದನೆಯನ್ನು ಮಿತಿಗೊಳಿಸದೇ ಇದ್ದರೆ ಡೀಸೆಲ್​ ವಾಹನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿ, ಮಾರಾಟ ಕಷ್ಟವಾಗಿಸುವುದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ದಾರಿಯಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರು ಭಾರತೀಯ ಕಾರು ತಯಾರಕರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

                 ದೆಹಲಿಯಲ್ಲಿಂದು ನಡೆದ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್​ಐಎಎಂ) 63ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಗಡ್ಕರಿ ಅವರು ಮಾತನಾಡಿದರು.

                  ಡೀಸೆಲ್​ಗೆ ವಿದಾಯ ಹೇಳಿ… ಡೀಸೆಲ್​ ವಾಹನಗಳ ತಯಾರಿಕೆಯನ್ನು ನಿಲ್ಲಿಸಿ, ಇಲ್ಲವಾದಲ್ಲಿ ನಾವು ತೆರಿಗೆಯನ್ನು ಹೆಚ್ಚಿಸಬೇಕಾಗುತ್ತದೆ. ಇದರಿಂದ ಡೀಸೆಲ್​ ಕಾರುಗಳ ಮಾರಾಟ ಕಷ್ಟವಾಗಲಿದೆ ಎಂದು ಗಡ್ಕರಿ ಅವರು ಹೇಳಿದರು.

                    ಡೀಸೆಲ್​ ವಾಹನಗಳ ಮಾರಾಟದ ಮೇಲೆ ಶೇ. 10ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಇಂತಹ ಪ್ರಸ್ತಾವನೆಯನ್ನು ಸರ್ಕಾರ ಸದ್ಯಕ್ಕೆ ಪರಿಗಣಿಸಿಲ್ಲ. 2070ರ ವೇಳೆಗೆ ಕಾರ್ಬನ್ ನೆಟ್ ಶೂನ್ಯವನ್ನು ಸಾಧಿಸಲು ಮತ್ತು ಡೀಸೆಲ್‌ನಂತಹ ಅಪಾಯಕಾರಿ ಇಂಧನಗಳಿಂದ ಉಂಟಾಗುವ ವಾಯು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಆಟೋಮೊಬೈಲ್ ಮಾರಾಟದಲ್ಲಿನ ತ್ವರಿತ ಬೆಳವಣಿಗೆಗೆ ಅನುಗುಣವಾಗಿ, ಸ್ವಚ್ಛ ಮತ್ತು ಹಸಿರು ಪರ್ಯಾಯ ಇಂಧನಗಳನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಇಂಧನಗಳ ಆಮದು ಬದಲಿಗಳಾಗಿರಬೇಕು, ವೆಚ್ಚ-ಪರಿಣಾಮಕಾರಿಯಾಗಿರಬೇಕು, ಸ್ಥಳೀಯ ಮತ್ತು ಮಾಲಿನ್ಯ ಮುಕ್ತವಾಗಿರಬೇಕು ಎಂದು ಗಡ್ಕರಿ ಅವರು ಎಕ್ಸ್​(ಟ್ವಿಟರ್​)ನಲ್ಲಿ ತಿಳಿಸಿದರು.

                    ಸದ್ಯ ಆಟೋಮೊಬೈಲ್ ಕ್ಷೇತ್ರದ ಮೇಲೆ ಶೇ. 28​ ಜಿಎಸ್​ಟಿ ಇದೆ. ಅಲ್ಲದೆ, ಹೆಚ್ಚುವರಿ ಸೆಸ್​ ( ವಾಹನದ ಮಾದರಿಗೆ ಅನುಗುಣವಾಗಿ ಶೇ. 1 ರಿಂದ ಶೇ. 22ರವರೆಗೆ) ಕೂಡ ಇದೆ. ಎಸ್​ಯುವಿ ವಾಹನಗಳು 28 ರಷ್ಟು ಜಿಎಸ್​ಟಿ ಮತ್ತು 22 ರಷ್ಟು ಸೆಸ್​ನೊಂದಿಗೆ ಅತ್ಯಧಿಕ ತೆರಿಗೆಯನ್ನು ಹೊಂದಿದೆ. 
                      ಡೀಸೆಲ್​ ಅನ್ನು ಅಪಾಯಕಾರಿ ಇಂಧನವೆಂದು ಕರೆದ ನಿತಿನ್​ ಗಡ್ಕರಿ, ಇಂಧನ ಮೇಲಿನ ಅತಿ ಹೆಚ್ಚಿನ ಬೇಡಿಕೆಯಿಂದ ಇಂಧನ ಆಮದು ಮೇಲೆ ಭಾರತದ ಅವಲಂಬನೆ ಹೆಚ್ಚಾಗಿದೆ. 2014ರಲ್ಲಿ ಶೇ.53 ರಿಂದ ಇಂದಿನ 18 ಪರ್ಸೆಂಟ್​ ವರೆಗೆ ಡೀಸೆಲ್​ ಕಾರುಗಳ ಸಂಖ್ಯೆಯ ಕುಸಿತವು ನಿಜಕ್ಕೂ ಒಂದು ಒಳ್ಳೆಯ ಸಂಕೇತ ಎಂದು ಗಡ್ಕರಿ ತಿಳಿಸಿದರು. ಅಲ್ಲದೆ, ಡೀಸೆಲ್​ ಕಾರುಗಳ ತಯಾರಿಕೆಯನ್ನು ಬಿಟ್ಟು ಎಥೆನಾಲ್​, ಹಸಿರು ಹೈಡ್ರೋಜನ್​ನಂತಹ ಪರಿಸರ ಸ್ನೇಹಿ ಇಂಧನ ಆಧಾರಿತ ವಾಹನಗಳ ತಯಾರಿಕೆಯ ಮೇಲೆ ಹೆಚ್ಚು ಗಮನ ಹರಿಸಿ ಎಂದು ಕಾರು ತಯಾರಿಕರಿಗೆ ಗಡ್ಕರಿ ಸಲಹೆ ನೀಡಿದರು.

                    ಪ್ರಸ್ತುತ ದೇಶದಲ್ಲಿ ಮಾರುತಿ ಸುಜುಕಿ ಮತ್ತು ಹೋಂಡಾ ಕಂಪನಿಗಳು ಡೀಸೆಲ್​ ಚಾಲಿತ ವಾಹನಗಳ ತಯಾರಿಕೆಯನ್ನು ನಿಲ್ಲಿಸಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries