HEALTH TIPS

ಪಾಕಿಸ್ತಾನದ ಸೀಮಾಳಿಂದ ಪ್ರಧಾನಿ ಮೋದಿ ಜನ್ಮದಿನ ಆಚರಣೆ

           ಖನೌ: ಪ್ರಿಯಕರನಿಗಾಗಿ ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿರುವ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್​ ಪ್ರಧಾನಿ ಮೋದಿ ಅವರ ಜನ್ಮದಿನವನ್ನು ಆಚರಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

            ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಸೀಮಾ ಹೈದರ್​ ಕೇಕ್​ ಕತ್ತರಿಸಿ ಪ್ರಧಾನಿ ಮೋದಿಗೆ ಶುಭ ಹಾರೈಸುತ್ತಿರುವುದು ಕಂಡು ಬರುತ್ತದೆ.


               ಭಾರತಕ್ಕೆ ವಿಶ್ವದಾದ್ಯಂತ ಕೀರ್ತಿ ತಂದುಕೊಟ್ಟಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನುಮದಿನದ ಶುಭಾಶಯಗಳು ಎಂದು ಹೇಳಿರುವ ಸೀಮಾ ಹೈದರ್​, ವೈರಲ್​ ಆಗಿರುವ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿ ಶುಭ ಕೋರಿದ್ದಾರೆ.


              ಇತ್ತ ಸೀಮಾ ಹೈದರ್​ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಅವರ ನಡೆಯನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ಸೀಮಾ ಹೈದರ್​ ಪ್ರಧಾನಿ ಮೋದಿ ಅವರ ಜನ್ಮದಿನಾಚರಣೆ ಆಚರಿಸಿರಲಿಲ್ಲವೆಂದರೆ ಅದು ಅಪೂರ್ಣವಾಗುತ್ತಿತ್ತು ಎಂದು ವ್ಯಂಗ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ.

             ಈ ಹಿಂದೆ ದೇಶದ ಪ್ರಮುಖ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಷಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಸೇರಿದಂತೆ ಹಲವರಿಗೆ ರಕ್ಷಾ ಬಂಧನದ ಪ್ರಯುಕ್ತ ರಾಖಿ ಕಳುಹಿಸುವ ಮೂಲಕ ಸೀಮಾ ಹೈದರ್​ ಸುದ್ದಿಯಲ್ಲಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries