HEALTH TIPS

ಕಾರು ರಹಿತ ದಿನ: ಬೈಕ್‌ನಲ್ಲಿ ಹೆಲಿಪ್ಯಾಡ್‌ಗೆ ಬಂದ ಹರಿಯಾಣ ಮುಖ್ಯಮಂತ್ರಿ ಖಟ್ಟರ್

               ಚಂಡೀಗಡ: ವಾಯುಮಾಲಿನ್ಯ ತಗ್ಗಿಸಲು ಪ್ರತಿ ಮಂಗಳವಾರ 'ಕಾರು- ರಹಿತ' ದಿನವನ್ನಾಗಿ ಘೋಷಿಸಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್ ಅವರು ಇಂದು ಮೋಟಾರ್‌ ಬೈಕ್‌ನಲ್ಲಿ ಪ್ರಯಾಣಿಸಿದರು.


                 ಕಾರ್‌ ಫ್ರೀ ಡೇ ಎಂದು ಸೆ. 2ರಂದು ಮುಖ್ಯಮಂತ್ರಿ ಘೋಷಿಸಿದ್ದರು. ಅದರ ಅನ್ವಯ ಪ್ರತಿ ಮಂಗಳವಾರ ಕಾರು ಬಳಸದಂತೆ ಉತ್ತೇಜಿಸಲು ಸ್ವತಃ ಕಾರು ಬಿಟ್ಟು ಸಂಚರಿಸಲು ವಿನೂತನ ಪ್ರಯತ್ನ ನಡೆಸಿದ್ದಾರೆ.

             ಮಾದಕದ್ರವ್ಯ ಮುಕ್ತ ಹರಿಯಾಣ ಎಂಬ ಸೈಕ್ಲೊಥಾನ್ ಡೇ ಆಚರಿಸಿ, ಅದರಲ್ಲಿಯೂ ಖಟ್ಟರ್ ಸೈಕಲ್‌ ತುಳಿದಿದ್ದರು.

                 ಮಂಗಳವಾರ ಬೆಳಿಗ್ಗೆ ಬುಲೆಟ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಖಟರ್‌ ‍‍ಪ್ರಯಾಣಿಸಿದರು. ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಹೊರಟ ಅವರನ್ನು ಹಿಂದೆ, ಪೊಲೀಸರು ಹಾಗೂ ಅಧಿಕಾರಿಗಳೂ ತಮ್ಮ ತಮ್ಮ ದ್ವಿಚಕ್ರ ವಾಹನದಲ್ಲಿ ಅನುಸರಿಸಿದರು.

              ಅಲ್ಲಿ ಅವರಿಗಾಗಿ ಕಾದಿದ್ದ ಹೆಲಿಕಾಪ್ಟರ್ ಮೂಲಕ ಖಟ್ಟರ್ ಮುಂದೆ ಪ್ರಯಾಣ ಬೆಳೆಸಿದರು. ಮುಖ್ಯಮಂತ್ರಿ ಪ್ರಯಾಣಕ್ಕಾಗಿ ರಸ್ತೆಯಲ್ಲಿ ಇತರ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries