ಗ್ಯಾಂಗ್ಟಜ್: ಮೇಘಸ್ಫೋಟ ಹಾಗೂ ನಂತರ ತೀಸ್ತಾ ನದಿಯಲ್ಲಿ ಉಂಟಾಗಿದ್ದ ಪ್ರವಾಹದಿಂದಾಗಿ ಉತ್ತರ ಸಿಕ್ಕಿಂನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರಲ್ಲಿ 56 ಜನರನ್ನು ಇಂಡೊ ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯು ರಕ್ಷಿಸಿದೆ.
0
samarasasudhi
ಅಕ್ಟೋಬರ್ 09, 2023
ಗ್ಯಾಂಗ್ಟಜ್: ಮೇಘಸ್ಫೋಟ ಹಾಗೂ ನಂತರ ತೀಸ್ತಾ ನದಿಯಲ್ಲಿ ಉಂಟಾಗಿದ್ದ ಪ್ರವಾಹದಿಂದಾಗಿ ಉತ್ತರ ಸಿಕ್ಕಿಂನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರಲ್ಲಿ 56 ಜನರನ್ನು ಇಂಡೊ ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯು ರಕ್ಷಿಸಿದೆ.
'ಚುಂಗ್‌ತಾಂಗ್‌ನಲ್ಲಿ ರೋಪ್‌ವೇ ನೆರವಿನಲ್ಲಿ ನಾಲ್ವರು ಮಹಿಳೆಯರು ಸೇರಿ 56 ಜನರನ್ನು ರಕ್ಷಿಸಲಾಗಿದೆ' ಎಂದು ಐಟಿಬಿಪಿಯು 'ಎಕ್ಸ್' ಜಾಲತಾಣದಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದೆ.
'ಮೇಘಸ್ಫೋಟದಿಂದಾಗಿ ಬುಧವಾರ ಪ್ರವಾಹ ಉಂಟಾಗಿತ್ತು. ಇದರಿಂದಾಗಿ ಸಿಕ್ಕಿಂನ ನಾಲ್ಕು ಜಿಲ್ಲೆಗಳಲ್ಲಿ ಸುಮಾರು 41,870 ಜನರು ಬಾಧಿತರಾಗಿದ್ದಾರೆ' ಎಂದು ಸಿಕ್ಕಿಂನ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರವು (ಎಸ್‌ಎಸ್‌ಡಿಎಂಎ) ತಿಳಿಸಿದೆ.
ಶೋಧ ಕಾರ್ಯಕ್ಕಾಗಿ ವಿಶೇಷ ರಾಡಾರ್, ಡ್ರೋನ್ ಬಳಸಲಾಗಿದೆ. ಶ್ವಾನದಳದ ನೆರವು ಪಡೆಯಲಾಗಿದೆ. ಇದುವರೆಗೂ 2,563 ಜನರನ್ನು ರಕ್ಷಿಸಲಾಗಿದೆ. 6,875 ಜನರು ವಿವಿಧ ಶಿಬಿರಗಳಲ್ಲಿ ರಕ್ಷಣೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರವಾಹದದಿಂದಾಗಿ ರಾಜ್ಯದಲ್ಲಿ 1,320 ಮನೆಗಳು ಹಾನಿಗೊಂಡಿವೆ. ಸುಮಾರು 13 ಸೇತುವೆಗಳು ಕೊಚ್ಚಿಹೋಗಿವೆ. ಮಂಗನ್ ಜಿಲ್ಲೆಯ ಲಾಚೆನ್, ಲಾಚುಂಗ್‌ನಲ್ಲಿ ಸುಮಾರು 3 ಸಾವಿರ ಪ್ರವಾಸಿಗರು ಅತಂತ್ರರಾಗಿದ್ದಾರೆ ಎಂದು ವಿವರಿಸಿದ್ದಾರೆ.