ನವದೆಹಲಿ: ಗಡಿಗಳಲ್ಲಿನ ಗಸ್ತು ಹಾಗೂ ದಾಳಿಯ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ 6 ಗಸ್ತು ದೋಣಿಗಳು, 8 'ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್' (ಎಲ್‌ಸಿಎ) ಹಾಗೂ 118 ಕಣ್ಗಾವಲು ವ್ಯವಸ್ಥೆಗಳ ಖರೀದಿಗೆ ಭಾರತೀಯ ಸೇನೆ ಮುಂದಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
0
samarasasudhi
ಅಕ್ಟೋಬರ್ 18, 2023
ನವದೆಹಲಿ: ಗಡಿಗಳಲ್ಲಿನ ಗಸ್ತು ಹಾಗೂ ದಾಳಿಯ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ 6 ಗಸ್ತು ದೋಣಿಗಳು, 8 'ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್' (ಎಲ್‌ಸಿಎ) ಹಾಗೂ 118 ಕಣ್ಗಾವಲು ವ್ಯವಸ್ಥೆಗಳ ಖರೀದಿಗೆ ಭಾರತೀಯ ಸೇನೆ ಮುಂದಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಪೂರ್ವ ಲಡಾಕ್ ಬಳಿಯ ಪಾಂಗಾಂಗ್ ಸರೋವರವೂ ಸೇರಿದಂತೆ ಗಡಿಗಳಲ್ಲಿರುವ ಜಲಕಾಯಗಳಲ್ಲಿ ಕಣ್ಗಾವಲನ್ನು ಹೆಚ್ಚಿಸುವುದಕ್ಕಾಗಿ ಗಸ್ತು ನಾವೆಗಳನ್ನು ಖರೀದಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಯುದ್ಧನೌಕೆಗಳಲ್ಲಿರುವ ಯೋಧರನ್ನು ಶತ್ರು ಸೈನಿಕರು ಇರುವ ತೀರಗಳತ್ತ ಕ್ಷಿಪ್ರವಾಗಿ ಕರೆದೊಯ್ಯಲು ಬಳಸುವ ಬೋಟುಗಳನ್ನು 'ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್' (ಎಲ್‌ಸಿಎ) ಎನ್ನಲಾಗುತ್ತದೆ.
ಈ ದೋಣಿಗಳು ಹಾಗೂ ಎಲ್‌ಸಿಎಗಳು ಹಾಗೂ ಕಣ್ಗಾವಲು ವ್ಯವಸ್ಥೆಗಳ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿ ಸೇನೆಯು ಟೆಂಡರ್ ಕರೆಯಲಾಗಿದ್ದು, ಟೆಂಡರ್ ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 28 ಕೊನೆಯ ದಿನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಡಾಕ್ ಬಳಿಯ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಕಳೆದ ಮೂರು ವರ್ಷಗಳಿಂದ ಚೀನಾ ಹಾಗೂ ಭಾರತದ ಸೈನಿಕರ ಸಂಘರ್ಷ ನಡೆಯುತ್ತಿದೆ. ಉಭಯ ದೇಶಗಳ ನಡುವೆ ರಾಜತಾಂತ್ರಿಕ ಮತ್ತು ಮಿಲಿಟರಿ ಕಮಾಂಡರುಗಳ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ಯೋಧರನ್ನು ವಾಪಸು ಕರೆಸಿಕೊಳ್ಳುವ ಪ್ರಕ್ರಿಯೆಯೂ ಪೂರ್ಣಗೊಂಡಿದೆ.
ಈಗ, ಗಡಿಗಳಲ್ಲಿ ಕಣ್ಗಾವಲನ್ನು ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ ಈ ಪರಿಕರಗಳನ್ನು ಖರೀದಿಸಲು ಸೇನೆ ಮುಂದಾಗಿರುವುದು ಗಮನಾರ್ಹ.