ನವದೆಹಲಿ: ಸಂಘರ್ಷ ಪೀಡಿತ ಪ್ಯಾಲೆಸ್ಟೀನ್ ಜನರಿಗಾಗಿ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ವಿಮಾನ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಿಂದ ಹೊರಟಿದೆ.
0
samarasasudhi
ಅಕ್ಟೋಬರ್ 22, 2023
ನವದೆಹಲಿ: ಸಂಘರ್ಷ ಪೀಡಿತ ಪ್ಯಾಲೆಸ್ಟೀನ್ ಜನರಿಗಾಗಿ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ವಿಮಾನ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಿಂದ ಹೊರಟಿದೆ.
ಔಷಧಿಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್‌ಗಳು, ಹೊದಿಕೆ, ನೈರ್ಮಲ್ಯ ಉಪಕರಣಗಳು, ನೀರು ಶುದ್ಧೀಕರಣ ಮಾತ್ರೆಗಳು ಹಾಗೂ ಇತರ ಅಗತ್ಯ ವಸ್ತುಗಳನ್ನು ಪ್ಯಾಲೆಸ್ಟೀನ್‌ಗೆ ರವಾನಿಸಲಾಗಿದೆ.
ಪ್ಯಾಲೆಸ್ಟೀನ್ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಬ್ಬಾಸ್ ಅವರ ಜೊತೆ ಈಚೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಪ್ಯಾಲೆಸ್ಟೀನ್ ಜನರಿಗೆ ಮಾನವೀಯ ನೆಲೆಯಲ್ಲಿ ನೆರವು ಒದಗಿಸುವುದನ್ನು ಭಾರತವು ಮುಂದುವರಿಸಲಿದೆ ಎಂಬ ಭರವಸೆ ನೀಡಿದ್ದರು.
ಇಸ್ರೇಲ್-ಪ್ಯಾಲೆಸ್ಟೀನ್ ವಿಚಾರವಾಗಿ ಭಾರತ ಹಿಂದಿನಿಂದಲೂ ತಾಳಿರುವ ನೈತಿಕ ನೆಲೆಗಟ್ಟಿನ ನಿಲುವನ್ನು ಮೋದಿ ಅವರು ಮಾತುಕತೆಯ ಸಂದರ್ಭದಲ್ಲಿ ಪುನರುಚ್ಚರಿಸಿದ್ದರು. ಭಯೋತ್ಪಾದನೆ, ಹಿಂಸಾಚಾರದ ಬಗ್ಗೆ ಭಾರತ ಹೊಂದಿರುವ ಕಳವಳವನ್ನು ಕೂಡ ವ್ಯಕ್ತಪಡಿಸಿದ್ದರು.