ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ದುರ್ಗಾ ಪೂಜೆ ಪ್ರಯುಕ್ತ ದೇಶದ ಜನತೆಗೆ ಶುಭ ಹಾರೈಸಿದ್ದಾರೆ.
0
samarasasudhi
ಅಕ್ಟೋಬರ್ 22, 2023
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ದುರ್ಗಾ ಪೂಜೆ ಪ್ರಯುಕ್ತ ದೇಶದ ಜನತೆಗೆ ಶುಭ ಹಾರೈಸಿದ್ದಾರೆ.
'ದೇಶದಾದ್ಯಂತ ಇರುವ ನನ್ನ ಕುಟುಂಬದ ಸದಸ್ಯರಿಗೆ ದುರ್ಗಾ ಪೂಜೆಯ ಶುಭಾಶಯಗಳು. ದುರ್ಗಾ ಮಾತೆಯು ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಸಂತೋಷದಾಯಕ ಜೀವನವನ್ನು ಕರುಣಿಸಲಿ' ಎಂದು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಬರೆದುಕೊಂಡಿದ್ದಾರೆ.
ದೇಶದಾದ್ಯಂತ ನವರಾತ್ರಿ ರಂಗು ತುಂಬಿಕೊಂಡಿದೆ. ದಸರಾ ಅಂಗವಾಗಿ ದೇಶದ ಹಲವೆಡೆ ಪ್ರಮುಖ ದುರ್ಗಾ ದೇವಸ್ಥಾನಗಳಲ್ಲಿ ದೇವರಿಗೆ ನಿತ್ಯ ವಿಶೇಷ ಪೂಜೆ, ಹೋಮ, ಹವನಗಳು ನಡೆಯುತ್ತಿವೆ. ಪ್ರತಿದಿನ ದೇವಿಗೆ ವಿಶಿಷ್ಟ ಅಲಂಕಾರ ಮಾಡಲಾಗುತ್ತಿದ್ದು, ದರ್ಶನ ಪಡೆಯಲು ಸಾವಿರಾರು ಭಕ್ತರು ಮುಗಿಬೀಳುತ್ತಿದ್ದಾರೆ.
ಹಿಂದೂ ದೇವತೆ ದುರ್ಗೆಯ ಹತ್ತು ದಿನಗಳ ಆರಾಧನೆಯಾದ 'ದುರ್ಗಾ ಪೂಜೆ'ಯು ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಆಚರಿಸಲ್ಪಡುತ್ತದೆ. ವಿಶೇಷವಾಗಿ ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಮತ್ತು ಭಾರತದ ಇತರ ಭಾಗಗಳಲ್ಲಿಯೂ ಆಚರಣೆಯಾಗುತ್ತದೆ.