ಕುಂಬಳೆ: ಮೇರಿ ಮೆಟ್ಟಿ-ಮೇರಿ ದೇಶ್ ಅಭಿಯಾನದ ಅಂಗವಾಗಿ ಯುವ ಮೋರ್ಚಾ ಕುಂಬಳೆ ಪಂಚಾಯತಿ ಸಮಿತಿಯ ವತಿಯಿಂದ ಕುಂಬಳೆ ಸೀಮೆಯ ನಾಲ್ಕು ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಮುಜುಂಗಾವು ಶ್ರೀಪಾರ್ಥಸಾರಥಿ ದೇವಸ್ಥಾನದ ಮಣ್ಣನ್ನು ಶೇಖರಿಸಲಾಯಿತು. ಜೊತೆಗೆ ಬಿಜೆಪಿ ಸದಸ್ಯತ್ವ ಅಭಿಯಾನದ ಅಂಗವಾಗಿ ಯುವಕರನ್ನು ಭೇಟಿಯಾಗಿ ಸದಸ್ಯತನವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಯುವ ಮೋರ್ಚಾ ಕುಂಬಳೆ ಮಂಡಲ ಅಧ್ಯಕ್ಷ ಅವಿನಾಶ್ ಕಾರಂತ್ ಹಾಗೂ ಯುವ ಮೋರ್ಚಾ ಕುಂಬಳೆ ಪಂಚಾಯತಿ ಅಧ್ಯಕ್ಷ ಅಜಿತ್ ಕುಮಾರ್ ಮತ್ತು ಯುವ ಮೋರ್ಚಾ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

.jpg)
