ಬದಿಯಡ್ಕ: ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಪಾಂಚಜನ್ಯ ಸಾರ್ವಜನಿಕ ಗ್ರಂಥಾಲಯಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಿತು. 50 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.
ಗ್ರಂಥಾಲಯದ ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರೋಪ ಸಮಾರಂಭದ ಗ್ರಂಥಾಲಯದ ಅಧ್ಯಕ್ಷ ಅಚ್ಚುತ ಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕುಂಬ್ಡಾಜೆ ಗ್ರಾಮಪಂಚಾಯಿತಿ ಸದಸ್ಯ ಹರೀಶ್ ಗೋಸಾಡ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಶುಂಪಾಲ ಸತೀಶ್ ವೈ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ, ಪಾಂಚಜನ್ಯ ಬಾಲಗೋಕುಲದ ಶಿಕ್ಷಕ ನಟರಾಜ ಕಲ್ಲಕಳಂಬಿ ಶುಭಾಶಂಸನೆಗೈದರು. ಹಿರಿಯರಾದ ಜನಾರ್ದನ ಮಣಿಯಾಣಿ ಬೆದ್ರುಕೂಡ್ಲು, ಬಾಬು ಮಣಿಯಾಣಿ ಜಯನಗರ ಉಪಸ್ಥಿತರಿದ್ದರು. ಪಾಂಚಜನ್ಯ ಸಾರ್ವಜನಿಕ ಗ್ರಂಥಾಲಯದ ಸಂಚಾಲಕÀ ರಮೇಶ್ ಕೃಷ್ಣ ಪದ್ಮಾರ್ ಸ್ವಾಗತಿಸಿ, ಪ್ರಶಾಂತ್ ಮಾಸ್ತರ್ ಪ್ರಯರಾಗಮ್ ಜಯನಗರ ವಂದಿಸಿದರು. ಲಾವಣ್ಯ ಟೀಚರ್ ಅಗಲ್ಪಾಡಿ, ರಮ್ಯಾ ದೀಪಕ್ ಬೆದ್ರುಕೂಡ್ಲು ತೀರ್ಪುಗಾರರಾಗಿ ಸಹಕರಿಸಿದರು. ಗಿರೀಶ್ ಪಿ ಕೆ, ಚಂದ್ರ ಪದ್ಮಾರ್, ಕೃಷ್ಣ ಪ್ರಸಾದ್ ಬೆದ್ರುಕೂಡ್ಲು ಸಹಕರಿಸಿದರು. ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

.jpg)
