ನವದೆಹಲಿ: ತಾಂಜೇನಿಯಾ ಅಧ್ಯಕ್ಷೆ ಸಾಮಿಯಾ ಸುಲುಹು ಅವರು ಇಂದು (ಸೋಮವಾರ) ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು.
0
samarasasudhi
ಅಕ್ಟೋಬರ್ 09, 2023
ನವದೆಹಲಿ: ತಾಂಜೇನಿಯಾ ಅಧ್ಯಕ್ಷೆ ಸಾಮಿಯಾ ಸುಲುಹು ಅವರು ಇಂದು (ಸೋಮವಾರ) ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾಮಿಯಾ, 'ಭಾರತ ಮತ್ತು ತಾಂಜೇನಿಯಾ ನಡುವೆ ದಶಕಗಳಿಂದ ಉತ್ತಮ ಸಂಬಂಧ ಮುಂದುವರಿದಿರುವುದಕ್ಕಾಗಿ ನಮ್ಮ ದೇಶದ ಪರವಾಗಿ ಮೆಚ್ಚುಗೆ ವ್ಯಕ್ತಪಡಿಸಲು ಬಯಸುತ್ತೇನೆ. ನಾವು ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರ ಅಭಿವೃದ್ಧಿಗೆ ಪೂರಕವಾದ ಚರ್ಚೆ ನಡೆಸಲಿದ್ದೇವೆ. ನಮ್ಮ ಪೂರ್ವಿಕರು ಸ್ಥಾಪಿಸಿದ ನಮ್ಮ ದ್ವಿಪಕ್ಷೀಯ ಸಂಬಂಧ ಮುಂದಿನ ಹಲವು ದಶಕಗಳವರೆಗೆ ಮುಂದುವರಿಯಲಿದೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ' ಎಂದು ಹೇಳಿದ್ದಾರೆ.