HEALTH TIPS

ಹೈದರಾಬಾದ್‌- ದುಬೈ ವಿಮಾನ ಹೈಜಾಕ್ ಮಾಡುವ ಬೆದರಿಕೆ

             ಹೈದರಾಬಾದ್: ಹೈದರಾಬಾದ್‌- ದುಬೈ ವಿಮಾನವನ್ನು ಹೈಜಾಕ್‌ ಮಾಡುವುದಾಗಿ ಇ- ಮೇಲ್‌ ಮೂಲಕ ಬೆದರಿಕೆ ಹಾಕಿದ ಕಾರಣ ರಾಜೀವ್‌ ಗಾಂಧಿ ಅಂತರರಾಷ್ಟ್ರಿಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ವಿಮಾನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.

           ವಿಮಾನ ನಿಲ್ದಾಣದ ವ್ಯವಸ್ಥಾಪಕರಿಗೆ, ಭಾನುವಾರ ಸಂಜೆ 'ದುಬೈಗೆ ಹೊರಟಿರುವ ವಿಮಾನದಲ್ಲಿ ಐಎಸ್‌ಐ ಉಗ್ರರಿಗೆ ಮಾಹಿತಿ ನೀಡುವ ವ್ಯಕ್ತಿಯಿದ್ದಾನೆ, ಆತ ವಿಮಾನವನ್ನು ಹೈಜಾಕ್‌ ಮಾಡಲಿದ್ದಾನೆ, ಅಲ್ಲದೆ ಆತ ವಿಮಾನ ನಿಲ್ದಾಣದಿಂದಲೇ ಕೆಲವು ಜನರ ಸಹಾಯವನ್ನು ಪಡೆದಿದ್ದಾನೆ' ಎಂದು ಸುಳ್ಳು ಬೆದರಿಕೆ ಇ- ಮೇಲ್‌ ಕಳುಹಿಸಲಾಗಿತ್ತು.

             ಈ ಬಗ್ಗೆ ತನಿಖೆ ನಡೆಸಿದ ಹಿರಿಯ ಪೊಲೀಸ್‌ ಕಮಿಷನರ್‌, ಇದೊಂದು ನಕಲಿ ಇ-ಮೇಲ್‌ ಬೆದರಿಕೆ ಎಂದು ಪತ್ತೆ ಮಾಡಿದ್ದು, ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

               ಬೆದರಿಕೆ ಕರೆಯಿಂದ ವಿಮಾನ ರದ್ದುಪಡಿಸಿ ಪ್ರಯಾಣಕರಿಗೆ ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಲಾಗಿದೆ. ಅನುಮಾನ ಬಂದ ಹಿನ್ನೆಲೆಯಲ್ಲಿ ಮೂವರು ಪ್ರಯಾಣಿಕರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಇ -ಮೇಲ್‌ ಕಳುಹಿಸಿದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries