HEALTH TIPS

250 ಹೃದ್ರೋಗಿಗಳಿಗೆ ಕಳಪೆ ಪೇಸ್‌ ಮೇಕರ್‌ ಅಳವಡಿಕೆ: ವೈದ್ಯ ಬಂಧನ

             ಖನೌ: ಉತ್ತರ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಕಳಪೆ ಗುಣಮಟ್ಟದ ಪೇಸ್‌ ಮೇಕರ್‌ ಅಳವಡಿಸಿ ಹಲವರ ಸಾವಿಗೆ ಕಾರಣವಾದ ಆರೋಪದ ಮೇರೆಗೆ ಹೃದಯ ರೋಗ ತಜ್ಞರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

               ಇಟಾವಾ ಜಿಲ್ಲೆಯ ಸೈಫೈ ವೈದ್ಯಕೀಯ ವಿಶ್ವವಿದ್ಯಾಲಯದ ಹೃದಯ ರೋಗ ತಜ್ಞ ಸಮೀರ್ ಸರ್ರಾಫ್ ಬಂಧಿತ.

                  ಸರ್ಕಾರಿ ಸ್ವಾಮ್ಯದ ಈ ವಿಶ್ವವಿದ್ಯಾಲಯದಲ್ಲಿ ರೋಗಿಗಳಿಗೆ ಈತ ಪೇಸ್‌ ಮೇಕರ್‌ ಅಳವಡಿಸಿರುವುದು ತನಿಖೆಯಿಂದ ಗೊತ್ತಾಗಿದೆ.

                  ಈತ ಅಳವಡಿಸಿದ್ದ ಕಳಪೆ ಗುಣಮಟ್ಟದ ಸಾಧನದಿಂದಾಗಿ ಹಲವು ರೋಗಿಗಳ ದೇಹದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

                ಈ ಪೇಸ್‌ ಮೇಕರ್‌ ಅಳವಡಿಕೆಗೆ ಸಮೀರ್‌ ಅವರು ರೋಗಿಗಳಿಗೆ ದುಬಾರಿ ಶುಲ್ಕವನ್ನೂ ವಿಧಿಸಿದ್ದಾರೆ. ಅಲ್ಲದೇ, ಈ ಸಾಧನ ನಿರ್ಮಿಸಿದ ಕಂಪನಿಗಳಿಂದ ಭಾರೀ ಪ್ರಮಾಣದಲ್ಲಿ ಕಮಿಶನ್‌ ಕೂಡ ಪಡೆದಿದ್ದಾರೆ. ಕಂಪನಿಗಳ ಖರ್ಚಿನಲ್ಲಿ ಹಲವು ಬಾರಿ ವಿದೇಶಿ ಪ್ರವಾಸವನ್ನೂ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

              ಪ್ರಕರಣ ಬಯಲಾಗಿದ್ದು ಹೇಗೆ?: ಕೆಲವು ತಿಂಗಳ ಹಿಂದೆ ಹೃದ್ರೋಗಿಯೊಬ್ಬರು ಕಳಪೆ ಗುಣಮಟ್ಟದ ಪೇಸ್‌ ಮೇಕರ್‌ ಅಳವಡಿಸಿರುವ ಬಗ್ಗೆ ದೂರು ನೀಡಿದ್ದರು. ಮಾರುಕಟ್ಟೆಯಲ್ಲಿ ಈ ಸಾಧನದ ಬೆಲೆ ₹96 ಸಾವಿರ ಇದೆ. ಆದರೆ, ವೈದ್ಯರು ₹1.85 ಲಕ್ಷ ಶುಲ್ಕ ನಿಗದಿಪಡಿಸಿದ್ದಾರೆಂದು ಆರೋಪಿಸಿದ್ದರು ಎಂದು ಮೂಲಗಳು ತಿಳಿಸಿವೆ.

                   ಈ ದೂರಿನ ಮೇರೆಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ತನಿಖೆಗೆ ಆದೇಶಿಸಿತ್ತು. 2017ರಿಂದ 2019ರ ನಡುವೆ ಹೃದ್ರೋಗಿಗಳಿಗೆ ಪೇಸ್‌ ಮೇಕರ್‌ ಅಳವಡಿಸಿರುವ ಸಂಗತಿಯು ತನಿಖೆಯಿಂದ ಬಹಿರಂಗೊಂಡಿದೆ.

              'ಈ ಕೃತ್ಯದಲ್ಲಿ ವಿಶ್ವವಿದ್ಯಾಲಯದ ಇತರೆ ಸಿಬ್ಬಂದಿ ಕೂಡ ಭಾಗಿಯಾಗಿರುವ ಶಂಕೆಯಿದೆ. ಈ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಪೇಸ್‌ ಮೇಕರ್?: ಹೃದ್ರೋಗಿಗಳು ಎದೆ ಬಡಿತ ಕಡಿಮೆ ಅಥವಾ ಹೆಚ್ಚಾದರೂ ತೀವ್ರ ಸಮಸ್ಯೆಗೆ ಸಿಲುಕುತ್ತಾರೆ. ಇದರ ಸಮನ್ವಯಕ್ಕಾಗಿ ಹೃದಯದಲ್ಲಿ 'ಪೇಸ್‌ ಮೇಕರ್' ಎಂಬ ಸಾಧನ ಅಳವಡಿಸಲಾಗುತ್ತದೆ. ಈ ಸಾಧನವು ಹೃದಯ ಬಡಿತವನ್ನು ಪತ್ತೆಹಚ್ಚಿ ಹೆಚ್ಚು ಅಥವಾ ಕಡಿಮೆಯಾದಾಗ ಹೃದಯವನ್ನು ಎಚ್ಚರಿಸಿ ಮತ್ತೆ ಕೆಲಸ ನಿರ್ವಹಿಸುವಂತೆ ಮಾಡುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries