ತಿರುವನಂತಪುರಂ: 65 ವರ್ಷದ ವ್ಯಕ್ತಿಯೊಬ್ಬರಿಗೆ ಎಐ ಕ್ಯಾಮರಾ ಮೂಲಕ 310 ಬಾರಿ ದಂಡ ವಿಧಿಸಲಾಗಿದೆ. ತಿರುವನಂತಪುರದ ಕಾಟ್ಟಾಕ್ಕಡ ನಿವಾಸಿ ಆಗಸ್ಟಿನ್ ಎಂಬವರಿಗೆ ಹಲವು ಬಾರಿ ಕಾನೂನು ಉಲ್ಲಂಘನೆ ಮಾಡಿರುವುದು ಕಂಡು ಬಂದರೂ ನೋಟಿಸ್ ಕಳುಹಿಸದೇ ಸಂಕಷ್ಟಕ್ಕೀಡಾಗಿದ್ದಾರೆ. ಇದೀಗ ಏಕಾಏಕಿ ಒಂದೂವರೆ ಲಕ್ಷದ ವರೆಗೆ ದಂಡದ ಮೊತ್ತ ಪಾವತಿಸಲು ನೋಟೀಸು ಕಳಿಸಲಾಗಿದೆ.
ಎμÉ್ಟೂೀ ಬಾರಿ ದಂಡ ಕಟ್ಟಿದರೂ ನೋಟಿಸ್ ಬಂದಿರಲಿಲ್ಲವಾದ್ದರಿಂದ ಅಗಸ್ಟಿನ್ ಗೆ ಈ ವಿಚಾರ ತಿಳಿದಿರಲಿಲ್ಲ. ಅಗಸ್ಟಿನ್ ಕಿಲ್ಲಿಎತ್ತಿರುತ್ತಿ ಎಂಬಲ್ಲಿ ಬೇಕರಿಯೊಂದರಲ್ಲಿ ಭದ್ರತಾ ಸಿಬ್ಬಂದಿ. ಮಗನ ಹೆಸರಿನ ಬೈಕ್ ಅನ್ನು ಬೇಕರಿ ಮತ್ತು ಆಹಾರ ವಿತರಣೆಗೆ ಬಳಸುತ್ತಿದ್ದರು.
ನಿನ್ನೆ ಬೈಕ್ ಸಂಬಂಧ ದೂರುಗಳಿವೆಯೇ ಎಂದು ಪರಿಶೀಲಿಸಿದಾಗ 310 ಬಾರಿ ಕ್ಯಾಮರಾ ಕಣ್ಣಿನಲ್ಲಿ ತಪ್ಪೆಸಗಿದ್ದಕ್ಕೆ ದಂಡ ಪಾವತಿಸುವ ಸೂಚನೆ ಬಂದಿರುವುದು ಗೊತ್ತಾಗಿದೆ. ಎ.ಐ. ಕ್ಯಾಮೆರಾ ಒಂದೂವರೆ ಲಕ್ಷಕ್ಕೂ ಹೆಚ್ಚು ಶುಲ್ಕ ವಿಧಿಸಿದೆ. ಅಗಸ್ಟಿನ್ ಪ್ರಕಾರ, ದಂಡ ಪಾವತಿಸದ ಬಳಿಕವೂ ನೋಟಿಸ್ ಕಳಿಸಿರುವುದು ಕಾನೂನು ಉಲ್ಲಂಘನೆಯಾಗಿದೆ. ಬಡತನ ಕಾರಣ ಮತ್ತು ಹೃದ್ರೋಗಿಯಾಗಿರುವ ತಾನು ಔಷಧ ಖರೀದಿಸಲು ಬೇಕರಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ಆಗಸ್ಟಿನ್. ಇಷ್ಟು ದೊಡ್ಡ ಮೊತ್ತವನ್ನು ಪಾವತಿಸುವುದು ಹೇಗೆ ಎಂಬ ಚಿಂತೆ ಅವರಲ್ಲಿದೆ.





