HEALTH TIPS

ಪ್ಯಾಲೆಸ್ಟೀನ್ ನಿರಾಶ್ರಿತರ ಕೇಂದ್ರದ ಮೇಲೆ ಮತ್ತೆ ಇಸ್ರೇಲ್ ದಾಳಿ: 53 ಸಾವು

             ಜೆರುಸಲೇಂ: ಮಾನವೀಯ ನೆಲೆಗಟ್ಟಿನಲ್ಲಿ ಗಾಜಾದಲ್ಲಿ ಕದನ ವಿರಾಮ ಘೋಷಣೆ ಮಾಡಬೇಕು ಎಂಬ ವಿಶ್ವಸಂಸ್ಥೆಯ ಕರೆಯ ಹೊರತಾಗಿಯೂ ಇಸ್ರೇಲ್ ದಾಳಿ ಮುಂದುವರಿಸಿದೆ.

             ಕೇಂದ್ರ ಗಾಜಾ ಪಟ್ಟಿಯ 2 ನಿರಾಶ್ರಿತರ ಕೇಂದ್ರದ ಮೇಲೆ ಭಾನುವಾರ ಇಸ್ರೇಲ್ ವಾಯುದಾಳಿ ನಡೆಸಿದ್ದು, ಕನಿಷ್ಠ 53 ಮಂದಿ ಸಾವಿಗೀಡಾಗಿದ್ದಾರೆ.

              ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮಗಾಝಿ ನಿರಾಶ್ರಿತರ ಕೇಂದ್ರದ ಮೇಲಿನ ದಾಳಿಯಲ್ಲಿ 40 ಮಂದಿ ಸಾವನ್ನಪ್ಪಿದ್ದಾರೆ. 34 ಮಂದಿ ಗಾಯಗೊಂಡಿದ್ದಾರೆ.

             ಬುರೇಜಿ ನಿರಾಶ್ರಿತರ ಕೇಂದ್ರದ ಮೇಲೆ ಮತ್ತೊಂದು ದಾಳಿ ನಡೆದಿದ್ದು, ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲ್‌ ಅಕ್ಸಾ ಆಸ್ಪತ್ರೆಯ ಸಿಬ್ಬಂದಿಗಳು ತಿಳಿಸಿದ್ದಾರೆ. ಇದೇ ಕೇಂದ್ರದ ಮೇಲೆ ಗುರುವಾರವೂ ದಾಳಿ ನಡೆದಿತ್ತು.

               ಗಾಜಾದಲ್ಲಿ ಸಂವಹನ ಸಂಪರ್ಕ ಕಡಿತಗೊಂಡಿದ್ದು, ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ. ಹಮಾಸ್‌- ಇಸ್ರೇಲ್ ಯುದ್ಧ ಪ್ರಾರಂಭವಾದ ಬಳಿಕ ಸಂವಹನ ವ್ಯವಸ್ಥೆ ಕಡಿತಗೊಳ್ಳುತ್ತಿರುವುದು ಇದು ಮೂರನೇ ಬಾರಿ.

                ಗಾಜಾ ನಗರವನ್ನು ಸುತ್ತುವರಿದಿದ್ದಾಗಿ ಇಸ್ರೇಲ್ ಹೇಳಿದೆ. ಗಾಜಾವನ್ನು ದಕ್ಷಿಣ ಹಾಗೂ ಉತ್ತರ ಗಾಜಾ ಎಂದು ಎರಡು ಭಾಗ ಮಾಡಿಕೊಂಡಿದೆ. ಇನ್ನು 48 ಗಂಟೆಗಳಲ್ಲಿ ಇಸ್ರೇಲಿ ಪಡೆಗಳು ಗಾಜಾ ನಗರಕ್ಕೆ ನುಗ್ಗುವ ಸಾಧ್ಯತೆ ಇದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

                 ಇಸ್ರೇಲ್-ಹಮಾಸ್ ಯುದ್ಧದಲ್ಲಿ ಪ್ಯಾಲೆಸ್ಟೀನಿಯನ್ನರ ಸಾವಿನ ಸಂಖ್ಯೆ 9,700 ದಾಟಿದೆ. ಈ ಪೈಕಿ 4 ಸಾವಿರಕ್ಕೂ ಅಧಿಕ ಮಕ್ಕಳೇ ಸೇರಿದ್ದಾರೆ ಎಂದು ಗಾಜಾದ ಆರೋಗ್ಯ ಇಲಾಖೆ ಹೇಳಿದೆ. ಪಶ್ಚಿಮ ದಂಡೆಯಲ್ಲಿ 140ಕ್ಕೂ ಅಧಿಕ ಪ್ಯಾಲೆಸ್ಟೀನಿಯನ್ನರು ಇಸ್ರೇಲ್‌ ದಾಳಿಯಿಂದಾಗಿ ಸಾವಿಗೀಡಾಗಿದ್ದಾರೆ.

ಹಮಾಸ್‌ ದಾಳಿಯಿಂದಾಗಿ ಅಕ್ಟೋಬರ್‌ 7ರಿಂದ ಈವರೆಗೆ 1,400 ಮಂದಿ ಇಸ್ರೇಲ್ ನಾಗರಿಕರು ಸಾವಿಗೀಡಾಗಿದ್ದಾರೆ. 242 ಮಂದಿ ಇಸ್ರೇಲಿಗರನ್ನು ಹಮಾಸ್ ಒತ್ತೆಯಾಳಾಗಿರಿಸಿಕೊಂಡಿವೆ.

                ಬುಧವಾರದಿಂದ ರಫಾ ಗಡಿಯ ಮೂಲಕ 1,100 ಮಂದಿ ಗಾಜಾ ಪಟ್ಟಿಯನ್ನು ತೊರೆದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries