HEALTH TIPS

ಅಕ್ಟೋಬರ್-ಸೆಪ್ಟೆಂಬರ್ ನಲ್ಲಿ ಉಷ್ಣ ಹವೆ ದಿನಗಳನ್ನು ಎದುರಿಸಿದ ಟಾಪ್ 5 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ

                   ನವದೆಹಲಿ: ಅಕ್ಟೋಬರ್ 2022- ಸೆಪ್ಟೆಂಬರ್ 2023 ರ ಅವಧಿ ಭಾರತೀಯರಿಗೆ ಸುಡು ಬೇಸಿಗೆಯಲ್ಲಿ ಬದುಕಿದಂತಾಗಿತ್ತು ಎಂದು ಅಧ್ಯಯನ ವರದಿಯೊಂದು ಹೇಳಿದೆ. 

                      ಈ ಅವಧಿಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಉಷ್ಣಹವೆಯನ್ನು ಎದುರಿಸಿದ ಟಾಪ್ 5 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಇದೆ ಎಂದು ಅಮೇರಿಕಾ ಮೂಲದ ಹವಾಮಾನ ಕೇಂದ್ರ ನಡೆಸಿದ ಅಧ್ಯಯನ ವರದಿ ಹೇಳಿದೆ.
     
                  ಕೇರಳ, ಗೋವಾ, ಅಂಡಮಾನ್-ನಿಕೋಬಾರ್, ಪುದುಚೆರಿ, ಮಿಜೋರಾಮ್, ಕರ್ನಾಟಕಗಳಲ್ಲಿನ ಜನರು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಹೆಚ್ಚಿನ ಉಷ್ಣಹವೆ ಎದುರಿಸಿದ್ದಾರೆ ಎಂದು ಅಧ್ಯಯನ ವರದಿ ಹೇಳಿದೆ.

                ಮಾನ ಬದಲಾವಣೆಯಿಂದ ಉಂಟಾಗುವ ತಾಪಮಾನವು ಶಾಖದ ಅಲೆಗಳಾಗಿ ಪರಿವರ್ತನೆಯಾಗುತ್ತವೆ.  ಈ Heat wave ಅಥವಾ ಉಷ್ಣಹವೆ ಭಾರತದಲ್ಲಿ ಕನಿಷ್ಠ 264 ಜನರ ಸಾವಿಗೆ ಕಾರಣವಾಯಿತು ಎಂದು ಅಧ್ಯಯನ ವರದಿ ಹೇಳಿದೆ. ಬದಲಾಗುತ್ತಿರುವ ಹವಾಮಾನ ಹಾಗೂ ಜನಸಾಮಾನ್ಯರ ಮೇಲೆ ಅವುಗಳ ಪರಿಣಾಮದ ಕುರಿತು ವಾಸ್ತವಾಂಶಗಳನ್ನು ಪ್ರಕಟಿಸುವ ಸ್ವಾಯತ್ತ ವಿಜ್ಞಾನಿಗಳ ತಂಡ ಕ್ಲೈಮೆಟ್ ಸೆಂಟ್ರಲ್ ಆಗಿದೆ. ಜಾಗತಿಕವಾಗಿ ದಿನನಿತ್ಯದ ತಾಪಮಾನದ ಮೇಲೆ ಹವಾಮಾನ ಬದಲಾವಣೆಯ ಸ್ಥಳೀಯ ಪ್ರಭಾವವನ್ನು ಪ್ರಮಾಣೀಕರಿಸಲು ಈ ವಿಜ್ಞಾನಿಗಳ ತಂಡ ಹವಾಮಾನ ಬದಲಾವಣೆ ಸೂಚ್ಯಂಕ (ಸಿಎಸ್ ಐ) ವ್ಯವಸ್ಥೆಯನ್ನು ರಚಿಸಿದೆ. ಹೆಚ್ಚಿನ ಸೂಚ್ಯಂಕ, ಹೆಚ್ಚಿನ ತಾಪಮಾನಕ್ಕೆ ಕಾರಣವಾಗುತ್ತದೆ. ಹವಾಮಾನ ಬದಲಾವಣೆ ಶತಕೋಟಿ ಜನರಿಗೆ ಈ ಉಷ್ಣಹವೆಯನ್ನು ಹೆಚ್ಚಿಸಿದೆ ಎಂದು CSI ಹೇಳಿದೆ.

                    ಕಳೆದ 12 ತಿಂಗಳುಗಳಲ್ಲಿ ಜಾಗತಿಕ ಸರಾಸರಿ ತಾಪಮಾನ ಕೈಗಾರಿಕಾ ಪೂರ್ವದ ಬೇಸ್‌ಲೈನ್‌ಗಿಂತ (1850-1900) 1.32 ° C ಆಗಿದೆ. ಈ ಹಿಂದೆ ಅಕ್ಟೋಬರ್ 2015-ಸೆಪ್ಟೆಂಬರ್ 2016 ರ ಅವಧಿ ಅತಿ ಗರಿಷ್ಠ ತಾಪಮಾನ ದಾಖಲಾಗಿದ್ದ ವರ್ಷವಾಗಿತ್ತು. 

                 ಸರಾಸರಿ ತಾಪಮಾನವು 175 ದೇಶಗಳಲ್ಲಿ 30-ವರ್ಷದಲ್ಲೇ ಸಾಮಾನ್ಯ ಮಟ್ಟವನ್ನು ಮೀರಿದೆ ಎಂದು ಅಧ್ಯಯನ ಹೇಳಿದೆ. 7.8 ಶತಕೋಟಿ ಜನರು - ಅಂದರೆ ಶೇ.99 ರಷ್ಟು ಜನಸಂಖ್ಯೆ ಸರಾಸರಿಗಿಂತ ಹೆಚ್ಚಿನ ಉಷ್ಣತೆಯನ್ನು ಎದುರಿಸುತ್ತಿದ್ದರೆ, ಐಲ್ಯಾಂದ್ ಮತ್ತು ಲೆಸೊಥೊ ಮಾತ್ರ ಸಾಮಾನ್ಯಕ್ಕಿಂತ ತಂಪಾದ ತಾಪಮಾನವನ್ನು ದಾಖಲಿಸಿದೆ. ಹೆಚ್ಚುತ್ತಿರುವ ಶಾಖವು ಹವಾಮಾನ-ಸಂಬಂಧಿತ ಅಪಾಯಗಳಲ್ಲಿ ಅತ್ಯಂತ ಮಾರಕವಾಗಿದೆ.


    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Below Post Ad

    Qries