HEALTH TIPS

ಎಡರಂಗ ಸರ್ಕಾರ ಜನರನ್ನು ಸಾಲದ ಕೂಪಕ್ಕೆ ತಳ್ಳಿದೆ: ನಿವೇದಿತಾ ಸುಬ್ರಹ್ಮಣ್ಯ: ಬದಿಯಡ್ಕದಲ್ಲಿ ಜನಪಂಚಾಯಿತಿ ಕಾರ್ಯಕ್ರಮ ಉದ್ಘಾಟಿಸಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ

                   

                  ಬದಿಯಡ್ಕ: ಕೃಷಿಕರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜ್ಯಾರಿಗೆ ತಂದರೂ ಎಡರಂಗ ನೇತೃತ್ವದ ಕೇರಳ ಸರ್ಕಾರವು ಅದನ್ನು ಜನರಿಗೆ ತಲುಪಿಸುವಲ್ಲಿ ಹಿಂದೇಟುಹಾಕುತ್ತಿದೆ. ಕೇಂದ್ರದ ಯೋಜನೆಯನ್ನು ತನ್ನದೆಂದು ಸಾರಿಕೊಳ್ಳುತ್ತಾ ಜನರನ್ನು ವಂಚಿಸುವ ರಾಜ್ಯ ಸರ್ಕಾರವು ಜನರನ್ನು ಸಾಲದ ಕೂಪಕ್ಕೆ ತಳ್ಳಿದೆ ಎಂದು ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ನ್ಯಾಯವಾದಿ. ನಿವೇದಿತಾ ಸುಬ್ರಹ್ಮಣ್ಯ ಹೇಳಿದರು.

                 ಎನ್.ಡಿ.ಎ ಬದಿಯಡ್ಕ ಪೂರ್ವ ವಲಯ ಪಂಚಾಯಿತಿ ಸಮಿತಿ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಶನಿವಾರ ಸಂಜೆ ಜರಗಿದ ಜನಪಂಚಾಯತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

               ನರೇಂದ್ರ ಮೋದಿ ಸರ್ಕಾರವು ಬಡಜನರ ಪರವಾಗಿದೆ ಎಂಬುದನ್ನು ನಾವು ಎದೆತಟ್ಟಿ ಹೇಳಬಲ್ಲೆವು. ಭಾರತಾಂಬೆಗೆ ಜೈ ಎನ್ನುವ ಎಲ್ಲರನ್ನೂ ನಾವು ಸ್ನೇಹಿತರಂತೆ ಕಾಣುತ್ತೇವೆ. ಆದರೆ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ಬಿಜೆಪಿ ಸರ್ಕಾರವಿದೆ ಎಂಬುದನ್ನು ವಿರೋಧಿಗಳು ತಿಳಿದಿರಬೇಕು ಎಂದು ತಿಳಿಸಿದ ಅವರು ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳ ವಿವರಣೆಯನ್ನು ನೀಡಿ ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿ ಸರ್ಕಾರ ಅನಿವಾರ್ಯ ಎಂದರು. 

            ಬಿಜೆಪಿ ಮುಖಂಡ ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಎಂ.ಎಲ್.ಅಶ್ವಿನಿ ಮಾತನಾಡಿದರು. ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ನಾರಂಪಾಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ ಪಟ್ಲ, ಜಿಲ್ಲಾ ಉಪಾಧ್ಯಕ್ಷ ರಾಮಪ್ಪ ಮಂಜೇಶ್ವರ, ಮಹಿಳಾಮೋರ್ಚಾ ಜಿಲ್ಲಾಧ್ಯಕ್ಷೆ ಪುಷ್ಪಾ ಗೋಪಾಲನ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಈಶ್ವರ ಮಾಸ್ತರ್, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮುಂಡೋಳುಮೂಲೆ, ಭಾಸ್ಕರ ಬದಿಯಡ್ಕ, ಪುಷ್ಪಲತಾ, ಜಯಂತಿ ಪಾಲ್ಗೊಂಡಿದ್ದರು. ಅವಿನಾಶ್ ರೈ ಸ್ವಾಗತಿಸಿ, ಬಾಲಕೃಷ್ಣ ಶೆಟ್ಟಿ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries