ವಯನಾಡ್: ನಕ್ಸಲ್ ಗುಂಪುಗಳಿಗೆ ಯುವಕರನ್ನು ಸೇರಿಸಿಕೊಳ್ಳಲು ವಿಶೇಷ ಯೋಜನೆ ರೂಪಿಸಲಾಗಿದೆ ಎಂದು ವರದಿಯಾಗಿದೆ.
ಸಿಪಿಐ-ಮಾವೋವಾದಿ ಕೇಂದ್ರ ಸಮಿತಿಯ ಸದಸ್ಯರೊಬ್ಬರು ಯೋಜನೆ ಅನುಷ್ಠಾನಕ್ಕೆ ಕೇರಳಕ್ಕೆ ಆಗಮಿಸಿದ್ದಾರೆ ಎಂಬ ಮಾಹಿತಿ ಪೋಲೀಸರಿಗೆ ಲಭಿಸಿದೆ.
ವಿದ್ಯಾರ್ಥಿ ಯುವ ಸಂಘಟನೆಯಿಂದ ಹೆಚ್ಚಿನ ಕಾರ್ಯಕರ್ತರನ್ನು ನೇಮಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ನಂತರ ಈ ಕಾರ್ಯಕರ್ತರಿಗೆ ಗೆರಿಲ್ಲಾ ಯುದ್ಧದ ತರಬೇತಿ ನೀಡಲಾಗುವುದು. ವೈತಿರಿ ಗುಂಡಿನ ದಾಳಿಯಲ್ಲಿ ಕೆ.ಟಿ. ಜಲೀಲ್ ನಕ್ಸಲ್ ಯುವ ಚಳವಳಿಯ ಸದಸ್ಯನಾಗಿದ್ದ.
ಯುವಕರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡ ಬಳಿಕ, Àುುಖ್ಯವಾಗಿ ಕೇರಳದಲ್ಲಿ ತಮಗಾಗಿ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪೆÇಲೀಸರು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ವಯನಾಡು ಮತ್ತು ಕೋಝಿಕ್ಕೋಡ್ ಅರಣ್ಯ ಪ್ರದೇಶದಲ್ಲಿ ಭದ್ರತೆ ಏರ್ಪಡಿಸಲಾಗಿದೆ.





