ನವದೆಹಲಿ : ಖಾಲಿಸ್ತಾನ್ ಟೈಗರ್ ಫೋರ್ಸ್‌ಗೆ (ಕೆಟಿಎಫ್) ನೇಮಕಾತಿ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಶನಿವಾರ ಪೂರಕ ಆರೋಪಪಟ್ಟಿಯನ್ನು ದಾಖಲಿಸಿದೆ.
0
samarasasudhi
ನವೆಂಬರ್ 12, 2023
ನವದೆಹಲಿ : ಖಾಲಿಸ್ತಾನ್ ಟೈಗರ್ ಫೋರ್ಸ್‌ಗೆ (ಕೆಟಿಎಫ್) ನೇಮಕಾತಿ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಶನಿವಾರ ಪೂರಕ ಆರೋಪಪಟ್ಟಿಯನ್ನು ದಾಖಲಿಸಿದೆ.
ಆರೋಪಿಗಳಾದ ಅಮೃತ್‌ಪಾಲ್ ಸಿಂಗ್ ಅಲಿಯಾಸ್ ಅಮ್ಮಿ, ಅಮೃಕ್‌ಸಿಂಗ್, ಜಸ್ಸಾ ಸಿಂಗ್ ಮತ್ತು ಗಗನದೀಪ್ ಸಿಂಗ್ ಅಲಿಯಾಸ್ ಮಿಥಿ ವಿರುದ್ಧ ಇಲ್ಲಿನ ವಿಶೇಷ ಎನ್‌ಐಎ ಕೋರ್ಟ್‌ನಲ್ಲಿ ಆರೋಪಪಟ್ಟಿ ದಾಖಲಿಸಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.
ಭಯೋತ್ಪಾದನೆಗೆ ಸಂಚು ಆರೋಪ ಕುರಿತಂತೆ ಕೆಟಿಎಫ್ ಮತ್ತು ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ) ಅದರ ಜೊತೆಗೆ ಸಂಪರ್ಕವನ್ನು ಹೊಂದಿದ್ದ 12 ಸದಸ್ಯರ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಈಗ ಆರೋಪಪಟ್ಟಿ ದಾಖಲಿಸಿರುವ ನಾಲ್ವರು ಆರೋಪಿಗಳು ಮುಖ್ಯ ಆರೋಪಿ ಅರ್ಸ್ ದಾಲಾ ಜೊತೆಗೂಡಿ ಸಂಚಿನಲ್ಲಿ ಭಾಗಿಯಾಗಿದ್ದರು ಹಾಗೂ ಕೆಟಿಎಫ್‌ಗಾಗಿ ಸಂಪನ್ಮೂಲ ಕ್ರೋಡಿಕರಿಸಲು ಒತ್ತು ನೀಡಿದ್ದರು ಎಂದು ವಕ್ತಾರರು ತಿಳಿಸಿದ್ದಾರೆ.