HEALTH TIPS

ಗಾಜಾ ಮೇಲಿನ ದಾಳಿ: ಇಸ್ರೇಲ್ 'ಆತ್ಮರಕ್ಷಣೆ'ಯ ವಾದವನ್ನು ತಿರಸ್ಕರಿಸಿದ ಅರಬ್, ಮುಸ್ಲಿಂ ರಾಷ್ಟ್ರಗಳು!

              ರಿಯಾದ್: ಗಾಜಾದಲ್ಲಿ ಇಸ್ರೇಲಿ ಪಡೆಗಳು ನಡೆಸುತ್ತಿರುವ ದಾಳಿಯನ್ನು 'ಅನಾಗರಿಕ' ಕ್ರಮ ಎಂದು ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳು ಖಂಡಿಸಿವೆ. 

                ಸೌದಿ ಅರೇಬಿಯಾ ಮತ್ತು ಮುಸ್ಲಿಂ ರಾಷ್ಟ್ರಗಳು ಗಾಜಾದ ಮೇಲಿನ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಇಸ್ರೇಲ್ ಕರೆ ನೀಡಿವೆ. ರಿಯಾದ್‌ನಲ್ಲಿ ನಡೆದ ಜಂಟಿ ಇಸ್ಲಾಮಿಕ್-ಅರಬ್ ಶೃಂಗಸಭೆಯಲ್ಲಿ ಇಸ್ರೇಲ್ ಪ್ಯಾಲೆಸ್ತೀನ್ ವಿರುದ್ಧ ಎಸಗುತ್ತಿರುವ ಅಪರಾಧಗಳ ಹೊಣೆ ಹೊರಬೇಕು ಎಂದು ಘೋಷಿಸಲಾಯಿತು.

                   ಇಸ್ರೇಲ್ ನಿಂದ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ
ಏತನ್ಮಧ್ಯೆ, ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಸೌದಿ-ಆಫ್ರಿಕನ್ ಶೃಂಗಸಭೆಯಲ್ಲಿ ಗಾಜಾ ಮೇಲಿನ ದಾಳಿಯನ್ನು ಖಂಡಿಸಿದರು. ಇಸ್ರೇಲ್‌ನಿಂದ ಸಾಮಾನ್ಯ ಜನರನ್ನು ಗುರಿಯಾಗಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಲಾಗುತ್ತಿದೆ ಎಂದು ಅವರು ಹೇಳಿದರು.

                 ಈ ಯುದ್ಧ ಮತ್ತು ಬಲವಂತದ ಸ್ಥಳಾಂತರವನ್ನು ನಿಲ್ಲಿಸುವ ಅಗತ್ಯವನ್ನು ನಾವು ಒತ್ತಿಹೇಳುತ್ತೇವೆ. ಸ್ಥಿರತೆ ಮತ್ತು ಶಾಂತಿಯ ಮರುಸ್ಥಾಪನೆಗಾಗಿ ಪರಿಸ್ಥಿತಿಗಳನ್ನು ಸೃಷ್ಟಿಸುತ್ತೇವೆ ಎಂದು ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದರು. ಈ ಸಮ್ಮೇಳನದಲ್ಲಿ ಭಾಗವಹಿಸಲು ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ 50 ದೇಶಗಳ ನಾಯಕರು ರಿಯಾದ್ ಗೆ ಆಗಮಿಸಿದ್ದರು.

                  ಸಭೆಯಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಇಸ್ರೇಲ್ ವಿರುದ್ಧ ಅತ್ಯಂತ ಕಠಿಣ ಕ್ರಮಗಳನ್ನು ಪ್ರಸ್ತಾಪಿಸಿದರು. ಇಸ್ರೇಲ್‌ಗೆ ತೈಲ ಪೂರೈಕೆಯನ್ನು ನಿಲ್ಲಿಸುವಂತೆ ಕೇಳಿಕೊಂಡರು. ಇಸ್ರೇಲ್ ಮತ್ತು ಅದರ ಮಿತ್ರರಾಷ್ಟ್ರಗಳೊಂದಿಗಿನ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಕೊನೆಗೊಳಿಸುವ ಪರವಾಗಿ ಅನೇಕ ಇತರ ದೇಶಗಳು ಸಹ ಇದ್ದವು. ಆದರೆ, ಸಭೆಯಲ್ಲಿದ್ದ ಎಲ್ಲ ದೇಶಗಳೂ ಇದರಲ್ಲಿ ಸರ್ವಾನುಮತ ತೋರಲಿಲ್ಲ. ಈ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಇಸ್ರೇಲ್ ಮೇಲೆ ಒತ್ತಡ ಹೇರಲು ಇಲ್ಲಿ ಜಮಾಯಿಸಿದ್ದರು. ಸಭೆಯ ಮೂಲಕ ಅವರು ಮುಸ್ಲಿಂ ರಾಷ್ಟ್ರಗಳ ಏಕತೆಯನ್ನು ತೋರಿಸಲು ಬಯಸುತ್ತಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries