ಕೊಚ್ಚಿ: ಕೇರಳದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಟ್ನಾ ಮೂಲದ ಮಹಿಳೆಯ ಮಗುವಿಗೆ ಕೊಚ್ಚಿಯ ಮಹಿಳಾ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಎಂ.ಎ ಆರ್ಯ ಅವರು ಹಾಲುಣಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
0
samarasasudhi
ನವೆಂಬರ್ 24, 2023
ಕೊಚ್ಚಿ: ಕೇರಳದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಟ್ನಾ ಮೂಲದ ಮಹಿಳೆಯ ಮಗುವಿಗೆ ಕೊಚ್ಚಿಯ ಮಹಿಳಾ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಎಂ.ಎ ಆರ್ಯ ಅವರು ಹಾಲುಣಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಬಿಹಾರದ ಪಾಟ್ನಾದ ಮಹಿಳೆ ತನ್ನ ಪತಿ ಮತ್ತು ನಾಲ್ಕು ಮಕ್ಕಳೊಂದಿಗೆ ಕೆಲವು ಸಮಯದಿಂದ ಕೇರಳದಲ್ಲಿ ನೆಲೆಸಿದ್ದಾರೆ.
ಈ ಸಂದರ್ಭದಲ್ಲಿ ಮಹಿಳೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ತನ್ನ 4 ಮಕ್ಕಳೊಂದಿಗೆ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಬಂದಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು.
ಆಕೆಯ ನಾಲ್ವರು ಮಕ್ಕಳು ವಾರ್ಡ್‌ನಿಂದ ಹೊರಗಿದ್ದರು. ಅವರಲ್ಲಿ ಒಂದು ಮಗು ನಾಲ್ಕು ತಿಂಗಳ ಹಸಿಗೂಸಾಗಿದ್ದು, ತಾಯಿಯ ಪಕ್ಕದಲ್ಲೇ ಮಲಗಿಸಲಾಗಿತ್ತು. ಹಸಿವಿನಿಂದ ಅಳುತ್ತಿದ್ದ ಆ ಮಗುವನ್ನು ಕಂಡ 9 ತಿಂಗಳ ಮಗುವಿನ ತಾಯಿ, ಪೊಲೀಸ್ ಅಧಿಕಾರಿ ಆರ್ಯ ಹಾಲುಣಿ ಹಸಿವು ನೀಗಿಸಿದ್ದಾರೆ. ಆರ್ಯ ಅವರ ಈ ಕಾರ್ಯಕ್ಕೆ ನಗರ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಅವರನ್ನು ಶಿಶುಪಾಲನಾ ಕೇಂದ್ರಕ್ಕೆ ಕರೆತರಲಾಗಿದೆ' ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.