HEALTH TIPS

ನಲ್ಕದಲ್ಲಿ ರಂಜಿಸಿದ ಶಂ.ನಾ.ಜಾದೂ ಜಗತ್ತು

          ಪೆರ್ಲ: ಮಕ್ಕಳಲ್ಲಿ ಕುತೂಹಲ ಮೂಡಿಸಿ ಕಲಿಕಾ ಅಂಶಗಳನ್ನು ಮನದಟ್ಟು ಮಾಡುವ ವಿಶಿಷ್ಟ "ಜಾದೂ ಮೂಲಕ ಕಲಿಕೆ" ಕಾರ್ಯಕ್ರಮ ನಲ್ಕ ವಾಗ್ದೇವಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಜರುಗಿತು.ಪೆರ್ಲ ಇಡಿಯಡ್ಕದ ನಿವಾಸಿ, ನಿವೃತ್ತ ಮುಖ್ಯ ಶಿಕ್ಷಕ ಶಂಕರನಾರಾಯಣ ಭಟ್ ಅವರು ಹಲವು ವರ್ಷಗಳಿಂದ ನಡೆಸಿ ಕೊಂಡು ಬರುತ್ತಿರುವ ಶಂ.ನಾ.ಜಾದೂ ಜಗತ್ತು ತಂಡ ಕಾರ್ಯಕ್ರಮ ನಡೆಸಿಕೊಟ್ಟಿತು.ಮನೋರಂಜನೆ ಜೊತೆಗೆ ಏಕಾಗ್ರತೆ, ತನ್ಮಯತೆ, ಬೌದ್ಧಿಕ ವಿಕಾಸಕ್ಕೆ ಜಾದು ಸಹಕಾರಿ ಎಂಬುದನ್ನು ಇವರು ಜಾದು ಪ್ರದರ್ಶನ ಮೂಲಕ ತೋರಿಸಿಕೊಟ್ಟರು.


             ಖಾಲಿ ಪೌಡರ್ ಡಬ್ಬದಿಂದ ಮಳೆ ಸುರಿಸುವ ಜಾದು ಕುತೂಹಲಕಾರಿ ಮಾತ್ರವಲ್ಲ ಇದರ ಜೊತೆ ಗಾಳಿಯ ಒತ್ತಡ ಪರಿಣಾಮವನ್ನು ಜಾದುಗಾರ ವಿವರಿಸಿದರು.  ಭೂ ಸಮಾನಾಂತರ ಕಲ್ಪನೆಯನ್ನು ರೋಪ್ ಸ್ಟಿಕ್ ಮೂಲಕ ಮಾಡಿ ತೋರಿಸಲಾಯಿತು. ನೀರಿನ ಅಕ್ಷಯ ಪಾತ್ರೆಯನ್ನು ಪ್ರದರ್ಶಿಸುವಾಗ ವಿವಿಧ ನದಿಗಳ ಹೆಸರನ್ನು ಪರಿಚಯಿಸುವುದರೊಂದಿಗೆ ನೀರಿನ ಮಿತವ್ಯಯ, ಜಲ ಮಾಲಿನ್ಯ ವಿಚಾರಗಳನ್ನು ಆಸಕ್ತಿದಾಯಕವಾಗಿ ತಿಳಿಸಿದರು. ನಾಣ್ಯಗಳ ಮತ್ತು ಬಣ್ಣಗಳ ಪರಿಚಯವನ್ನು ವಿವಿಧ ತಂತ್ರಗಳಲ್ಲಿ ಮಂಡಿಸಿದರು. ಹಾಲನ್ನು ಸೃಷ್ಟಿಸುವ ಜಾದುವಿನಲ್ಲಿ ಹಾಲಿನ ಪೋಷಕಾಂಶ ವಿವರಿಸಿದರು. ಪರಸ್ಪರ ಸಿಕ್ಕಿಹಾಕಿಕೊಂಡ ಕೊಂಡಿಗಳನ್ನು ಮಕ್ಕಳ ಕೈಗೆ ಕೊಟ್ಟು ಬೇರ್ಪಡಿಸುವಂತೆ ಸೂಚಿಸಿದರು. ಸಾಕಷ್ಟು ಪ್ರಯತ್ನಿಸಿದಾಗ ಮಕ್ಕಳು ಸಫಲ ಆಗುತ್ತಾರೆ. ಇದರೊಂದಿಗೆ ಮಕ್ಕಳ ಬುದ್ಧಿಯು ಚುರುಕಾಗುವುದು. ಶಾಲೆಗಳಲ್ಲಿ ವಿವಿಧ ಸಮಾರಂಭಗಳಲ್ಲಿ ಇವರ ತಂಡ ಜಾದು ಪ್ರದರ್ಶಿಸುತ್ತಾರೆ. ಹಲವು, ಮಕ್ಕಳಿಗೆ ಇವರು ಜಾದು ತರಬೇತಿಯನ್ನು ನೀಡುತ್ತಿದ್ದಾರೆ. ಇವರ ಪತ್ನಿ,ನಿವೃತ್ತ ಮುಖ್ಯ ಶಿಕ್ಷಕಿ ಶಕುಂತಲಾ ಅವರು ಸಹಕರಿಸಿದರು. ಶ್ರೀದತ್ತ,ನಿರ್ಭಿಕ್ ಅವರು ಜಾದೂ ಪ್ರದರ್ಶನದಲ್ಲಿ ಪಾಲ್ಗೊಂಡರು.

      ಶಾಲಾ ಮುಖ್ಯ ಶಿಕ್ಷಕ ಶ್ರೀಪತಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹೇಶ್ ವರ್ಮುಡಿ . ಶಾಲಾ ಪ್ರಬಂಧಕ ಸತ್ಯನಾರಾಯಣ ವರ್ಮುಡಿ ಉಪಸ್ಥಿತರಿದ್ದರು.ಶಾಲೆಯ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಶಿಕ್ಷಕಿ ಉμÁ ದೇವಿ ಸ್ವಾಗತಿಸಿ ನಳಿನಿ ವಂದಿಸಿದರು.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries