HEALTH TIPS

ಅಪಶಕುನ, ಮಂದ ಬುದ್ಧಿ, ಪಿಕ್‌ಪಾಕೆಟ್‌: ರಾಹುಲ್-ಮೋದಿ ಮಾತಿನ ಏಟು, ಎದಿರೇಟು

                  ಜೈಪುರ: ಅಪಶಕುನ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೆಗಳಿಕೆಗೆ ಮಂದ ಬುದ್ಧಿ ಎಂದು ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದರು. ಅದಕ್ಕೆ ಎದಿರೇಟು ನೀಡಿರುವ ರಾಹುಲ್, ಪಿಕ್‌ಪಾಕೇಟ್‌ ಗ್ಯಾಂಗ್‌ ಎಂದಿದ್ದಾರೆ.

                ರಾಜಸ್ಥಾನ ವಿಧಾನಸಭಾ ಚುನಾವಣೆ ಅಂಗವಾಗಿ ಧೊಲ್‌ಪುರ್‌ ಜಿಲ್ಲೆಯ ರಾಜಖೇಡಾದಲ್ಲಿ ಬುಧವಾರ ನಡೆದ ರ‍್ಯಾಲಿ ಸಂದರ್ಭದಲ್ಲಿ ಅವರು ಮಾತನಾಡಿದ್ದಾರೆ.

             'ಕಿಸೆಗಳ್ಳತನ್ನಕ್ಕೆ ಯಾರೂ ಒಬ್ಬರೇ ಬರುವುದಿಲ್ಲ. ಸದಾ ಮೂರು ಗುಂಪಿನಲ್ಲಿ ಬರುತ್ತಾರೆ. ಮೊದಲ ವ್ಯಕ್ತಿ ನಮ್ಮ ಗಮನ ಬೇರೆಡೆ ಸೆಳೆಯುತ್ತಾರೆ. ಎರಡನೇ ವ್ಯಕ್ತಿ ಆತನ ಸಹವರ್ತಿ ಜೇಬಿನಲ್ಲಿರುವುದನ್ನು ಕದಿಯುತ್ತಾನೆ. ಮೂರನೇ ವ್ಯಕ್ತಿ ಸಂತ್ರಸ್ತ ಪ್ರತಿರೋಧ ಒಡ್ಡುತ್ತಾನೆಯೇ ಎಂದು ಆತನ ಮೇಲೆ ನಿಗಾ ಇಟ್ಟಿರುತ್ತಾನೆ. ಒಂದೊಮ್ಮೆ ಆತ ಪ್ರತಿರೋಧ ತೋರಿದರೆ, ಆತನ ಮೇಲೆ ಮೂರನೇ ವ್ಯಕ್ತಿ ದಾಳಿ ನಡೆಸುತ್ತಾನೆ. ಇದು ಇವರ ಕಾರ್ಯವೈಖರಿ' ಎಂದು ವಾಗ್ದಾಳಿ ನಡೆಸಿದ್ದಾರೆ.

                 'ಗಮನ ಬೇರೆಡೆ ಸೆಳೆಯುವವರು ನರೇಂದ್ರ ಮೋದಿ. ಪಾಕೇಟು ಎತ್ತುವವರು ಅದಾನಿ, ಬೆದರಿಕೆಯೊಡ್ಡುವವರು ಅಮಿತ್ ಶಾ. ನರೇಂದ್ರ ಮೋದಿ ಅವರು ದೇಶವನ್ನು ಇಬ್ಬಾಗ ಮಾಡಿ, ಒಂದನ್ನು ಉದ್ಯಮಿ ಗೌತಮ ಅದಾನಿಗೆ ಮತ್ತೊಂದನ್ನು ದೇಶದ ಬಡವರಿಗೆ ನೀಡಲಿದ್ದಾರೆ' ಎಂದು ರಾಹುಲ್ ಆರೋಪಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries