ಮಲಪ್ಪುರಂ: ವಂದೇಭಾರದ ಮುಂದೆ ಹಳಿ ದಾಟಿದ ವ್ಯಕ್ತಿಯ ವಿರುದ್ಧ ಆರ್‍ಪಿಎಫ್ ಪೋಲೀಸರು ತಿರೂರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಪ್ಪಿಸಿಕೊಂಡ ನಂತರ ಶೋರ್ನೂರ್ ಕಡೆಗೆ ಹೋದ ಪ್ರಯಾಣಿಕ ಒಟ್ಟಪಾಲಂಗೆ ರೈಲು ಹತ್ತಿದ. ಘಟನೆಯ ಕುರಿತು ಆರ್‍ಪಿಎಫ್ ತನಿಖೆ ಆರಂಭಿಸಿದೆ.
ವೃದ್ದನ ಪತ್ತೆಗೆ ಸ್ಥಳೀಯ ಪೆÇಲೀಸರ ನೆರವು ಕೋರಲಾಗಿದೆ. ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಆರ್‍ಪಿಎಫ್ ಸಂಗ್ರಹಿಸಿದೆ. ವಯೋವೃದ್ಧರನ್ನು ಪತ್ತೆ ಹಚ್ಚಿ ಹೇಳಿಕೆ ಪಡೆದು ಪ್ರಕರಣ ಸೇರಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರ್ ಪಿಎಫ್ ಮಾಹಿತಿ ನೀಡಿದ್ದಾರೆ.
ತಿರೂರ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಆಗಮಿಸುತ್ತಿರುವಂತೆ ವೃದ್ದನೋರ್ವ ಹಳಿ ದಾಟಿದ್ದು, ಕೂದಳೆಳೆಯ ಅಂತರದಲ್ಲಿ ಪಾರಾಗಿದ್ದರು. ಇದು ಭಾರೀ ವೈರಲ್ ಕೂಡಾ ಆಗಿತ್ತು. ಒಟ್ಟಪಾಲಂ ನಿವಾಸಿಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ತಿರೂರ್ ರೈಲು ನಿಲ್ದಾಣದ ವಂದೇ ಭಾರತ್ ರೈಲು ಹಾದು ಹೋಗುತ್ತಿದ್ದಾಗ ಹಳಿ ಹಾರಿ ಪ್ಲಾಟ್‍ಫಾರ್ಮ್‍ಗೆ ಹತ್ತಿದರು. ಸೆಕೆಂಡ್ ಗಳ ಅಂತರದಲ್ಲಿ ಬರುತ್ತಿದ್ದ ರೈಲಿನಿಂದ ಪಾರಾಗಿದ್ದಾರೆ.





