ಮಧೂರು: ಪಿಂಚಣಿದಾರರ ಸಂಘದ ಮಧೂರು ಘಟಕದ ವಾರ್ಷಿಕ ಮಹಾಸಭೆ ಕೂಡ್ಲು ಮಾರಾರ್ಜಿ ಸಭಾಭವನದಲ್ಲಿ ನಡೆಯಿತು. ಆರ್ಥಿಕ ಮುಗ್ಗಟ್ಟಿನ ನೆವ ತಿಳಿಸಿ ರಾಜ್ಯ ಸರ್ಕಾರವು ಪಿಂಚಣಿದಾರರ ಪಿಂಚಣಿ ಪರಿಷ್ಕರಣೆ ಗಡು ತಡೆ ಹಿಡಿದಿರುವ, ಕ್ಷೇಮಭತ್ಯೆ ವಿತರಣೆ ನಡೆಸದೇ ಇರುವ ವಿಚಾರಗಳನ್ನು ಸಭೆ ಖಂಡಿಸಿದೆ.
ಸಂಘಟನೆಯ ರಾಜ್ಯ ಸಮಿತಿ ಉಪಾಧ್ಯಕ್ಷ ವಿನೋದ್ ಮಾಸ್ತರ್ ಪಳ್ಳಿಕುನ್ನು ಉದ್ಘಾಟಿಸಿದರು. ಎಂ.ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಈಶ್ವರ ರಾವ್, ಕಾರ್ಯದರ್ಶಿ ಬಲರಾಮ ಭಟ್, ಕೇಶವ ಭಟ್,ಕೆ.ನಾರಾಯಣಯ್ಯ, ನೂತನ ಕುಮಾರಿ ಮೊದಲಾದವರು ಇದ್ದರು.
ನೂತನ ಪದಾಧಿಕಾರಿಗಳನನು ಈ ಸಂದರ್ಭ ಆರಿಸಲಾಯಿತು. ಗೌರವಾಧ್ಯಕ್ಷರಾಗಿ ನಾರಾಯಣಯ್ಯ ಕೆ., ಕೆ.ಜಿ.ಶ್ಯಾನುಭೋಗ್, ಕೆ.ವಿಷ್ಣು ಭಟ್, ಅಧ್ಯಕ್ಷರಾಗಿ ಎಂ.ನಾರಾಯಣ, ಉಪಾಧ್ಯಕ್ಷರಾಗಿ ಕೆ.ಸತ್ಯನಾರಾಯಣ ತಂತ್ರಿ, ಕಾರ್ಯದರ್ಶಿಯಾಗಿ ಬಲರಾಮ ಭಟ್ ಮಧೂರು, ಜೊತೆ ಕಾರ್ಯದರ್ಶಿಯಾಗಿ ನೂತನಕುಮಾರಿ ಅವರನ್ನು ಆರಿಸಲಾಯಿತು.