HEALTH TIPS

ಕೈಗೆಟುಕಲಾಗದ ತೆರಿಗೆ: ಗಡಿ ದಾಟುತ್ತಿರುವ ಜೆ.ಸಿ.ಬಿ. ನೋಂದಣಿ

                    ಪಾಲಕ್ಕಾಡ್: ಕೇರಳದಲ್ಲಿ ಹೊಸ ಜೆ.ಸಿ.ಬಿ. ನೋಂದಾಯಿಸಲು, ಮೂರು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

                 ಪಕ್ಕದ ತಮಿಳುನಾಡಿನಲ್ಲಿ ಕೇವಲ 15,000 ರೂ.ಗೆ ನೋಂದಣಿ ಸಾಧ್ಯವಿದೆ. ಕರ್ನಾಟಕದಲ್ಲೂ 10-15 ಸಾವಿರದ ಮಧ್ಯೆ ಶುಲ್ಕವಿದೆ.  ಲಕ್ಷಗಟ್ಟಲೆ ತೆರಿಗೆ ಬಾಧ್ಯತೆ ತಪ್ಪಿಸಲು ತಮಿಳುನಾಡು-ಕರ್ನಾಟಕದಲ್ಲಿ ಬೇನಾಮಿ ಹೆಸರಿನಲ್ಲಿ ಜೆಸಿಬಿ ನೋಂದಣಿ ಮಾಡಲಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನೋಂದಣಿ ಬಳಿಕ ಕೇರಳಕ್ಕೆ ತಲುಪಿಸಲಾಗುತ್ತಿದೆ.

                 ಪಾಲಕ್ಕಾಡ್ ಗಡಿ ಜಿಲ್ಲೆ ಮಾತ್ರ ತಮಿಳುನಾಡು ನೋಂದಣಿಯೊಂದಿಗೆ ಸುಮಾರು 100 ಜೆಸಿಬಿಗಳನ್ನು ಬಳಸಲಾಗುತ್ತಿದೆ  ಎಂದು ನಿರ್ಮಾಣ ಸಲಕರಣೆ ಮಾಲೀಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಮೀರ್ ಬಾಬು ತಿಳಿಸಿರುವÀರು.

                ಕೇರಳದಲ್ಲಿ ಹೊಸ ಜೆಸಿಬಿ ನೋಂದಣಿ ವೇಳೆ  15 ವರ್ಷಗಳವರೆಗೆ 2,75,440 ತೆರಿಗೆ ಪಾವತಿಸ. ಇದಲ್ಲದೇ 34,430 ರೂಪಾಯಿ ಸೆಸ್ ಅಗತ್ಯವಿದೆ. ಕೇರಳದಲ್ಲಿ ಹೊಸ ಜೆಸಿಬಿಗೆ ನೋಂದಣಿ ಶುಲ್ಕಗಳು ಸೇರಿದಂತೆ ಸುಮಾರು 37 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಏತನ್ಮಧ್ಯೆ, ತಮಿಳುನಾಡಿನಲ್ಲಿ, ವಾಹನದ ಬೆಲೆ ಮತ್ತು ನೋಂದಣಿ ಶುಲ್ಕದ ಜೊತೆಗೆ ವಾರ್ಷಿಕ ತೆರಿಗೆಯಾಗಿ 14,500 ರೂ.ಮಾತ್ರ ಪಾವತಿಸದರೆ ಸಾಕಾಗುತ್ತದೆ.

          ಹೊಸ ವಾಹನವನ್ನು ಸಮರ್ಥವಾಗಿ ಬಳಸಬಹುದಾದ ಮೊದಲ ಐದು ಅಥವಾ ಆರು ವರ್ಷಗಳು. ಬಳಿಕ ಜಾಲರಿಯ ಸ್ಥಿತಿ ಮತ್ತಷ್ಟು ಹದಗೆಡುತ್ತದೆ ಮತ್ತು ಆಗಾಗ್ಗೆ ದುರಸ್ಥಿ ಬೇಕಾಗುತ್ತದೆ, ಆದ್ದರಿಂದ ಹೆಚ್ಚಿನ ಜನರು ಜೆಸಿಬಿ ಮಾರಾಟ ಮಾಡುತ್ತಾರೆ ಎಂದು ಮಾಲೀಕರು ಹೇಳುತ್ತಾರೆ. ಆದ್ದರಿಂದ, 15 ವರ್ಷಗಳವರೆಗೆ ಪಾವತಿಸಿದ ತೆರಿಗೆಯಲ್ಲಿ, ಒಂಬತ್ತು ವರ್ಷಗಳ ತೆರಿಗೆಯೂ ವ್ಯರ್ಥವಾಗುತ್ತದೆ. ಇದನ್ನು ತಪ್ಪಿಸಲು ಹಲವರು ತಮಿಳುನಾಡಿನಲ್ಲಿ ಜೆಸಿಬಿ ನೋಂದಣಿ ಮಾಡಿಕೊಂಡಿದ್ದಾರೆ. 

              ತಮಿಳುನಾಡಿನಲ್ಲಿ ಜೆ.ಸಿ.ಬಿ ಖರೀದಿಗೆ ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲವೂ ದೊರೆಯುತ್ತದೆ ಎನ್ನುತ್ತಾರೆ ತಜ್ಞರು. ಜೆಸಿಬಿ ತಮಿಳುನಾಡಿನಲ್ಲಿ ನೋಂದಣಿಯಾಗಿ ಕೇರಳಕ್ಕೆ ಬರಲು ಮತ್ತು ಹೋಗಲು ಯಾವುದೇ ಕಾನೂನಿನ ನಿಬರ್ಂಧವಿಲ್ಲ. ರಸ್ತೆ ಅಭಿವೃದ್ಧಿ ಇತ್ಯಾದಿಗಳ ಕಾರ್ಯಾದೇಶದ ಪ್ರಕಾರ, ಒಂದು ಬಾರಿ ತೆರಿಗೆ ಪಾವತಿಸಿದ ನಂತರ ಒಂದು ವಷರ್Àದವರೆಗೆ ಇಲ್ಲಿ ವ್ಯವಸ್ಥೆಯನ್ನು ಬಳಸಬಹುದು. ಅದಕ್ಕಿಂತ ಹೆಚ್ಚು ಇಲ್ಲಿ ತಂಗಿದರೆ ಇಲ್ಲಿ ತೆರಿಗೆ ಪಾವತಿಸಿ ನೋಂದಣಿ ಬದಲಾಯಿಸಿಕೊಳ್ಳಬೇಕು. ಆದರೆ ಇದ್ಯಾವುದೂ ಪಾಲಿಸುತ್ತಿಲ್ಲ.

            ಸೀಸನ್ ನಲ್ಲಿ ಕೇರಳಕ್ಕೆ ಬಂದು ಕೆಲಸ ಮುಗಿಸಿ ಹಿಂದಿರುಗುವ ಜೆಸಿಬಿಗಳಿವೆ. ಇವುಗಳನ್ನು ಹಿಡಿದಾಗ ಒಂದು ಬಾರಿ ತೆರಿಗೆ ಪಾವತಿಸಲಾಗುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries