HEALTH TIPS

ಮಧ್ಯಪ್ರಾಚ್ಯದಲ್ಲಿ ವಿಮಾನಗಳು GPS ಸಿಗ್ನಲ್ ಕಳೆದುಕೊಳ್ಳುತ್ತಿರುವ ಬಗ್ಗೆ ಡಿಜಿಸಿಎ ಕಳವಳ

            ನವದೆಹಲಿ: ಮಧ್ಯಪ್ರಾಚ್ಯದಲ್ಲಿ ವಿಮಾನಗಳು GPS ಸಿಗ್ನಲ್ ಕಳೆದುಕೊಳ್ಳುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ವಿಮಾನಯಾನ ನಿಯಂತ್ರಕ ಡಿಜಿಸಿಎ, ಜಾಗತಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್‌ಎಸ್‌ಎಸ್) ಜಾಮಿಂಗ್ ಮತ್ತು ವಂಚನೆ ತಡೆಯುವ ಕ್ರಮಗಳ ಕುರಿತು ಏರ್‌ಲೈನ್ಸ್ ಮತ್ತು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ)ಗೆ ಸುತ್ತೋಲೆ ಹೊರಡಿಸಿದೆ.

           ಸುತ್ತೋಲೆಯು ವಿಮಾನ ನಿರ್ವಾಹಕರು, ಪೈಲಟ್‌ಗಳು, ಏರ್ ನ್ಯಾವಿಗೇಷನ್ ಸರ್ವಿಸ್ ಪ್ರೊವೈಡರ್ಸ್ (ANSP) ಮತ್ತು ಏರ್ ಟ್ರಾಫಿಕ್ ಕಂಟ್ರೋಲರ್‌ಗಳಿಗೆ ಸಮಗ್ರ ನಿಯಂತ್ರಣ ಕ್ರಮಗಳು ಮತ್ತು ಕ್ರಿಯಾ ಯೋಜನೆಗಳನ್ನು ಒದಗಿಸುತ್ತದೆ.

              ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA) ವಾಯುಪ್ರದೇಶದಲ್ಲಿ GNSS ಹಸ್ತಕ್ಷೇಪದ ಕುರಿತು ಸಲಹಾ ಸುತ್ತೋಲೆಯನ್ನು ಬಿಡುಗಡೆ ಮಾಡಿರುವುದಾಗಿ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

                GNSS ಜ್ಯಾಮಿಂಗ್ ಮತ್ತು ವಂಚನೆಯ ಹೊಸ ಬೆದರಿಕೆಗಳು, ಅದನ್ನು ಗಮನಿಸಿದ ವಿವಿಧ ಭೌಗೋಳಿಕ ಪ್ರದೇಶಗಳು ಮತ್ತು ವಿಮಾನ ಮತ್ತು ಗ್ರೌಂಡ್ ಆಧಾರಿತ ವ್ಯವಸ್ಥೆಗಳ ಮೇಲೆ ಅದರ ಸಂಭಾವ್ಯ ಪ್ರಭಾವವನ್ನು ಸುತ್ತೋಲೆ ಎತ್ತಿ ತೋರಿಸುತ್ತದೆ ಎಂದು ವಿಮಾನಯಾನ ನಿಯಂತ್ರ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries