HEALTH TIPS

ಕರ್ನಾಟಕದ ಹೆಮ್ಮೆ, ಮೈಸೂರು ಸ್ಯಾಂಡಲ್ ಸೋಪ್: ಮಾಸಿಕ ರೂ.133 ಕೋಟಿಗೂ ಅಧಿಕ ವಹಿವಾಟು

        ಬೆಂಗಳೂರು: ಕರ್ನಾಟಕದ ಹೆಮ್ಮೆ, ಐತಿಹಾಸಿಕ ಮೈಸೂರು ಸ್ಯಾಂಡಲ್ ಸೋಪ್ ಉತ್ತಮವಾಗಿ ಮಾರಾಟವಾಗುತ್ತಿದ್ದು, ಮಾಸಿಕ ರೂ. 133 ಕೋಟಿಗೂ ಅಧಿಕ ವಹಿವಾಟು  ನಡೆಸುತ್ತಿದೆ.


             ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್,  ಕಂಪನಿಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಈ ವರ್ಷದ ನವೆಂಬರ್ ನಲ್ಲಿ ಮಾಸಿಕ ಉತ್ಪಾದನೆ 4,144 ಮೆಟ್ರಿಕ್ ಟನ್ ದಾಟಿರುವುದಾಗಿ ತಿಳಿಸಿದ್ದಾರೆ. 

              ಮಾಸಿಕ ರೂ.133 ಕೋಟಿಗೂ ಅಧಿಕ ವಹಿವಾಟು ನಡೆದಿದೆ.ಯಾವುದೇ ಹೆಚ್ಚುವರಿ ಹೂಡಿಕೆಯಿಲ್ಲದೆ, ಸುಧಾರಿತ ದಕ್ಷತೆಯಿಂದ ಈ ಸಾಧನೆ ಸಾಧ್ಯವಾಗಿದೆ. ಈ ವರ್ಷ ಕೆಎಸ್ ಡಿಎಲ್ ವಾರ್ಷಿಕ ಆದಾಯ 2,000 ಕೋಟಿ ದಾಟಬೇಕು.ಮುಂದಿನ ಐದು ವರ್ಷಗಳಲ್ಲಿ, ವಾರ್ಷಿಕ ಆದಾಯ 1 ಬಿಲಿಯನ್ ಡಾಲರ್ ಗೆ  ತಲುಪಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದಿದ್ದಾರೆ. 


    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

    Below Post Ad

    https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

    HOTEL

    HOTEL
    CENTURY
    Qries