ಜಕಾರ್ತ : ಸುಲಾವೇಸಿ ದ್ವೀಪದಲ್ಲಿರುವ ಚೀನಾ ಒಡೆತನದ ನಿಕೆಲ್ ಉತ್ಪಾದನಾ ಸ್ಥಾವರದಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 13 ಕಾರ್ಮಿಕರು ಮೃತಪಟ್ಟು, 46ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
0
samarasasudhi
ಡಿಸೆಂಬರ್ 25, 2023
ಜಕಾರ್ತ : ಸುಲಾವೇಸಿ ದ್ವೀಪದಲ್ಲಿರುವ ಚೀನಾ ಒಡೆತನದ ನಿಕೆಲ್ ಉತ್ಪಾದನಾ ಸ್ಥಾವರದಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 13 ಕಾರ್ಮಿಕರು ಮೃತಪಟ್ಟು, 46ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸುಲಾವೇಸಿ ಮಧ್ಯ ಪ್ರಾಂತ್ಯದ ಮೊರೊವಾಲಿ ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿರುವ ಪಿಟಿ ಇಂಡೊನೇಷ್ಯಾ ಟಿಂಗ್‌ಶಾನ್ ಸ್ಟೇನ್‌ಲೆಸ್ ಸ್ಟೀಲ್ (ಐಟಿಎಸ್‌ಎಸ್) ಒಡೆತನದ ಸ್ಥಾವರದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 5.30ಕ್ಕೆ ಈ ದುರ್ಘಟನೆ ಸಂಭವಿಸಿದೆ ಎಂದು ಸಂಕೀರ್ಣದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.