HEALTH TIPS

ಬಾಂಬೆ ಐಐಟಿಗೆ ₹57 ಕೋಟಿ ದೇಣಿಗೆ ನೀಡಿದ ಹಳೆಯ ವಿದ್ಯಾರ್ಥಿಗಳು

              ವದೆಹಲಿ: ಬಾಂಬೆ ಐಐಟಿಯ 1998ನೇ ಸಾಲಿನ ವಿದ್ಯಾರ್ಥಿಗಳು ತಮ್ಮ ಸಮ್ಮಿಲನದ ಬೆಳ್ಳಿ ಹಬ್ಬದ ಸ್ಮರಣಾರ್ಥ ಸಂಸ್ಥೆಗೆ ₹57 ಕೋಟಿ ಉಡುಗೊರೆಯಾಗಿ ನೀಡಿದ್ದಾರೆ. ತರಗತಿಯೊಂದರ ವಿದ್ಯಾರ್ಥಿಗಳು ನೀಡಿದ ಗರಿಷ್ಠ ಕೊಡುಗೆ ಇದಾಗಿದೆ.

               ಇದಕ್ಕೂ ಮುನ್ನ 1971ನೇ ಸಾಲಿನ ವಿದ್ಯಾರ್ಥಿಗಳು ತಮ್ಮ ಸಮ್ಮಿಲನದ ಸುವರ್ಣ ಮಹೋತ್ಸವ ಅಂಗವಾಗಿ ಸಂಸ್ಥೆಗೆ ₹41 ಕೋಟಿ ದೇಣಿಗೆ ನೀಡಿದ್ದರು.

                'ವೆಕ್ಟರ್‌ ಕ್ಯಾಪಿಟಲ್‌ ವ್ಯವಸ್ಥಾಪಕ ನಿರ್ದೇಶಕ ಅನುಪಮ್‌ ಬ್ಯಾನರ್ಜಿ, ಕೃತಕ ಬುದ್ಧಿಮತ್ತೆ ಸಂಶೋಧನೆ ಮಾಡುತ್ತಿರುವ ದಿಲೀಪ್ ಜಾರ್ಜ್‌, ಗ್ರೇಟ್‌ ಲರ್ನಿಂಗ್‌ ಸಿಇಒ ಮೋಹನ್‌ ಲಖಾಮ್‌ರಾಜು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ದೇಣಿಗೆ ನೀಡಿದ್ದಾರೆ' ಎಂದು ವಿದ್ಯಾರ್ಥಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

                  'ಈ ದೇಣಿಗೆಯು ಬಾಂಬೆ ಐಐಟಿಯ ಬೆಳವಣಿಗೆಗೆ ವೇಗ ನೀಡಲಿದೆ' ಎಂದು ನಿರ್ದೇಶಕ ಸುಭಾಸಿಸ್‌ ಚೌಧರಿ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries